
ಉಪ್ಪಳ : ಕಂಬಳೆ ಬಳಿಯ ಬಂಬ್ರಾಣ ಕೊಟ್ಯದಮನೆ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಶ್ರೀ ಧೂಮಾವತೀ ದೈವದ ವಾರ್ಷಿಕ ನೇಮೋತ್ಸವ ಇಂದು ಮತ್ತು ನಾಳೆ ನಡೆಯಲಿದೆ [ ಫೆ.೬ ಮತ್ತು,೭] ಇಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಹರಿಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ೬ಕ್ಕೆ ಭಜನೆ, ದುರ್ಗಾಪೂಜೆ, ರಾತ್ರಿ ೮ಕ್ಕೆ ರಾಹು ಗುಳಿಗ ಬನದಲ್ಲಿ ತಂಬಿಲ, ೮.೩೦ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು, ೯ಕ್ಕೆ ಸಹ ದೈವಗಳಿಗೆ ಮತ್ತು ಕಲಾಲ್ತ ಗುಳಿಗನ ಕೋಲ, ಅನ್ನಸಂತರ್ಪಣೆ, ನಾಳೆ [ಬುಧವಾರ] ಬೆಳಿಗ್ಗೆ ೧೧ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೬ಕ್ಕೆ ಕೊರತಿ ದೈವದ ಕೋಲ, ರಾತ್ರಿ ೮ರಿಂದ ಪರಿವಾರ ದೈವಗಳಾದ ವರ್ಣರ ಪಂಜುರ್ಲಿ, ಮುಕಾಂಬಿಕ ಗುಳಿಗ, ಕಲ್ಲುರ್ಟಿ ದೈವಗಳಿಗೆ ತಂಬಿಲ, ಅನ್ನಸಂತರ್ಪಣೆ ನಡೆಯಲಿದೆ.