
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಆಗಿ, ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಆಗಿ, ಮಂಗಳೂರು ವಿಭಾಗ ಸಂಘ ಚಾಲಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಗೋಪಾಲ್ ಚೆಟ್ಟಿಯಾರ್ (78) ಅವರು ಇಂದು ಬೆಳಿಗ್ಗೆ 2:45ಕ್ಕೆ ದೈವಾಧೀನರಾಗಿದ್ದಾರೆ.

1946 ಅಗಸ್ಟ್ 8ರಂದು ಜನಿಸಿದ ಇವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಲದವರಾಗಿದ್ದರೆ. ವಿದ್ಯಾರ್ಥಿ ಜೀವನದಿಂದಲ್ಲೇ ಸ್ವಯಂಸೇವಕರಾಗಿ, ಕಾರ್ಯಕರ್ತರಾಗಿ ಸಂಘದಲ್ಲಿ ತೊಡಗಿಸಿಕೊಂಡವರು, ತಹಶೀಲ್ದಾರ್ ರಾಗಿದ್ದ ಇವರು ನಿವೃತ್ತಿಯ ನಂತರ ಪೂರ್ಣಪ್ರಮಾಣದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಇವರ ಶಿಸ್ತುಬದ್ಧವಾದ ಜೀವನಶೈಲಿ, ಸೇವಾಭಾವ ಜಾಗರಣ, ಸಾಮಾಜಿಕ ಸಮರಸತೆಯ ಕಾರ್ಯಕಾರ್ಯಕರ್ತರಿಗೆ ಮೇಲ್ಪಂಕ್ತಿಯಾಗಿದೆ.

ಇವರ ಅಂತಿಮ ವಿಧಿವಿಧಾನಗಳು ಉಪ್ಪಳ ಸಮೀಪದ ಬಂದ್ಯೋಡು ಮನೆಯಲ್ಲಿ ಬೆಳಗ್ಗೆ 11:00ಕ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.