ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಕಿವಿನೋವಿನಿಂದ ಬಳಲಿರುತ್ತಾರೆ. ಒಮ್ಮೆ ಕಿವಿ ನೋವು ಕಾಣಿಸಿಕೊಂಡರೆ ಅದು ಬೇಗನೆ ವಾಸಿಯಾಗುವುದಿಲ್ಲ. ಹೊರತು ದೀರ್ಘ ಕಾಲದ ನೋವನ್ನು ನೀಡುತ್ತದೆ. ಕಿವಿ ನೋವು ಒಮ್ಮೆ ಕಾಣಿಸಿಕೊಂಡರೆ ಸಾಕು ಪಡುವ ಪಾಡು ಅಷ್ಟಿಷ್ಟಲ್ಲ ಅತ್ತ ಮಲಗು ಸಾಧ್ಯವಿಲ್ಲ ಇತ್ತ ಕೂರಲು ಸಾಧ್ಯವಿಲ್ಲ. ಕಿವಿನೋವು ಕಾಣಿಸಿಕೊಂಡಲ್ಲಿ ಅದನ್ನು ನಿರ್ಲಕ್ಷಿಸಿದರೆ ಸೋಂಕಾಗುವ ಸಾಧ್ಯತೆ ಇರುತ್ತದೆ. ಕಿವಿನೋವನ್ನು ಮದ್ದಿನಿಂದ ಗುಣಪಡಿಸುವುದು ಹೇಗೆ ಎಂದು ತಿಳಿಯೋಣ..
ಹಸಿಈರುಳ್ಳಿ ರಸವನ್ನು ನೋವಿರುವ ಕಿವಿಗೆ 2 ಹನಿ ಹಾಕುವುದರಿಂದ ಕಿವಿನೋವು ಹಾಗೂ ಕಿವಿ ಸೋರುತ್ತಿದ್ದರೆ ಕಡಿಮೆ ಆಗುತ್ತದೆ.
ಎಳ್ಳೆಣ್ಣೆಗೆ ನಿಂಬೆರಸ ಹಾಕಿ ಬಿಸಿಮಾಡಿ 2 ಹನಿ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆ ಆಗುತ್ತದೆ.
ಮೂಲಂಗಿಯನ್ನು ಬೆಂಬೂದಿಯಲ್ಲಿಟ್ಟು ನಂತರ ಅದನ್ನು ಜಜ್ಜಿ ರಸ ತೆಗೆದು 2 ಹನಿ ಕಿವಿಗೆ ಹಾಕುವುದರಿಂದ ಸೋರುವುದು ಕಡಿಮೆ ಆಗುತ್ತದೆ.
ಏಲಕ್ಕಿ ಎಣ್ಣೆಯನ್ನು ಕಿವಿಗೆ 2 ಹನಿ ಹಾಕಿದರೆ ಕಿವಿನೋವು ಕಡಿಮೆ ಆಗುತ್ತದೆ.
ಅಮೃತಬಳ್ಳಿಯ ಬೇರಿನ ರಸವನ್ನು ಎಳ್ಳೆಣ್ಣೆಯಲ್ಲಿ ಹಾಕಿ ಕುದಿಸಿ, ಆರಿಸಿ 2 ಹನಿಯಷ್ಟು ಹಾಕುತ್ತಾ ಬಂದರೆ, (೩ ದಿನ) ಕಿವಿನೋವು ಶಮನವಾಗುತ್ತದೆ.
ಒಂದು ಲವಂಗವನ್ನು ಜಜ್ಜಿ ಎಳ್ಳೆಣ್ಣೆಯಲ್ಲಿ ಹಾಕಿ ಕುದಿಸಿ, ಶೋಧಿಸಿ, ಆರಿಸಿ 2 ಹನಿ ಕಿವಿಗೆ ಹಾಕುವುದರಿಂದ ಕಿವಿನೋವು, ಕಿವಿ ಸಿಡಿತ ಕಡಿಮೆ ಆಗುತ್ತದೆ.
ನಿಂಬೆರಸವನ್ನು ಸಮಪ್ರಮಾಣ ಬಿಸಿನೀರಿನೊಂದಿಗೆ ಬೆರೆಸಿ ಕಿವಿಗೆ ಹಾಕುತ್ತಾ ಬಂದರೆ ಕಿವಿನೋವು ಕಡಿಮೆ ಆಗುತ್ತದೆ.