ಉಡುಪಿ: ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟು ಹೋದ 7 ಲಕ್ಷ ರೂಪಾಯಿ ಮೌಲ್ಯದ ಚೆಕ್ ಹಾಗೂ ದಾಖಲೆ ಪತ್ರವನ್ನು ರಿಕ್ಷಾ ಚಾಲಕರೊಬ್ಬರು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕುಂದಾಪುರ ನಿವಾಸಿ ಅನಂತ ದೇವಾಡಿಗ ಅವರು ಸೆ.18 ರಂದು ಮಣಿಪಾಲ ರಿಕ್ಷಾ ನಿಲ್ದಾಣದಿಂದ ಸತೀಶ್ ಎಂಬವರ ರಿಕ್ಷಾದಲ್ಲಿ ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿದ್ದು, ಈ ವೇಳೆ ಅವರು ಕೈಯಲ್ಲಿದ್ದ ಚೆಕ್ ಹಾಗೂ ದಾಖಲಾತಿಗಳನ್ನು ರಿಕ್ಷಾದಲ್ಲಿಯೇ ಮರೆತು ಬಿಟ್ಟು ಹೋಗಿದ್ದರು.
ಬಾಡಿಗೆ ಮುಗಿಸಿ ಮಣಿಪಾಲಕ್ಕೆ ಬಂದ ರಿಕ್ಷಾದಲ್ಲಿ ದಾಖಲಾತಿ ಬಿಟ್ಟು ಹೋಗಿರುವುದನ್ನು ಗಮನಿಸಿದ ಸತೀಶ್ ಅವರು ಈ ವಿಚಾರವನ್ನು ತಮ್ಮ ಸಂಘದ ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು ಅವರಿಗೆ ತಿಳಿಸಿದ್ದರು. ನಂತರ ವಾರೀಸುದಾರರನ್ನು ಪತ್ತೆ ಹಚ್ಚಿ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಹಾಗೂ ಎಸ್.ಐ ಗಳಾದ ಅಕ್ಷಯ ಕುಮಾರಿ, ರಾಘವೇಂದ್ರ ಹಾಗೂ ಮನೋಹರ್ ಕುಮಾರ್ ಮೂಲಕ ಚೆಕ್ ಹಾಗೂ ದಾಖಲಾತಿಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.