2024 ರ ಲೋಕಸಭಾ ಚುನಾವಣೆಗೆ ಕರಾವಳಿ ಭಾಗದಲ್ಲಿ ಬಿಜೆಪಿ ಬಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಧಾನಸಭಾ ಚುನಾವಣೆಯ ಸೋಲಿನಿಂದ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇರಿಸುತ್ತಿದೆ. ಈ ಬಾರಿ ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿಯಲ್ಲಿ ಮತ್ತೆ ಹಿಂದುತ್ವ ವರ್ಸಸ್ ಬಿಜೆಪಿ ಮಧ್ಯೆ ಏರ್ಪಟ್ಟಿದೆ ಬಿಗ್ ಫೈಟ್ .
ಮುಂಬರುವ ಲೋಕಸಭಾ ಚುನಾವಣೆಗೆ ಕರಾವಳಿ ಭಾಗದಲ್ಲಿ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ವಿಧಾನಸಭಾ ಚುನಾವಣೆಯ ಸೋಲಿನಿಂದ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಈ ಬಾರಿ ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿಯಲ್ಲಿ ಮತ್ತೆ ಹಿಂದುತ್ವ ವರ್ಸಸ್ ಬಿಜೆಪಿ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ. ವಿಧಾನಸಭೆ ಸೋಲಿನ ನಂತರ ಬಿಜೆಪಿಗೆ ಮತ್ತೊಂದು ಮಹಾ ಸವಾಲು ಎದುರಾಗಿದ್ದು, ಸಣ್ಣ ಚುನಾವಣೆಯಲ್ಲೂ ದೊಡ್ಡ ಪಕ್ಷಕ್ಕೆ ಮತ್ತೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾದಂತಾಗಿದೆ.
ಗ್ರಾ.ಪಂ ಉಪಚುನಾವಣೆಯಲ್ಲಿ ಬಿಜೆಪಿಗೆ ಪುತ್ತಿಲ ಪರಿವಾರ ಸವಾಲಾಗಿದ್ದು, ಪುತ್ತೂರಿನ ಎರಡೂ ಗ್ರಾ.ಪಂ ವಾರ್ಡ್‌ಗಳನ್ನ ಗೆಲ್ಲಲು ಬಿಜೆಪಿ ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದಿದೆ. ಇಂದು ಪುತ್ತೂರಿನ ಎರಡು ವಾರ್ಡ್‌ಗಳಲ್ಲಿ ಮತದಾನ ಆರಂಭವಾಗಿದ್ದು, ನಿಡ್ಪಳ್ಳಿ ಮತ್ತು ಆರ್ಯಾಪು ಗ್ರಾ.ಪಂನ ಎರಡೂ ವಾರ್ಡ್‌ಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧವೇ ಪುತ್ತಿಲ ಪರಿವಾರ ಸ್ಪರ್ಧೆ ಏರ್ಪಟ್ಟಿದ್ದು, ಎರಡೂ ವಾರ್ಡ್‌ಗಳಲ್ಲೂ ಬೆಂಬಲಿತ ಅಭ್ಯರ್ಥಿಗಳನ್ನು ಅರುಣ್ ಪುತ್ತಿಲ ಕಣಕ್ಕಿಳಿಸಿದ್ದಾರೆ.
ಇನ್ನು ಸದಸ್ಯರಿಬ್ಬರ ನಿಧನದ ಹಿನ್ನೆಲೆ ಇಂದು ಉಪಚುನಾವಣೆ ನಡೆಯುತ್ತಿದ್ದು,ಈ ಎರಡೂ ವಾರ್ಡ್‌ಗಳನ್ನು ಮತ್ತೆ ಗೆಲ್ಲುವುದು ಬಿಜೆಪಿಗೆ ಅನಿವಾರ್ಯ ಆಗಿದೆ. ನಿಡ್ಪಳ್ಳಿ ವಾರ್ಡ್ 2ರಲ್ಲಿ ಬಿಜೆಪಿ ಬೆಂಬಲಿತರಾಗಿ ಚಂದ್ರಶೇಖರ ಪ್ರಭು ಹಾಗೂ ಆರ್ಯಾಪು ವಾರ್ಡ್ 2ರಲ್ಲಿ ಜಗದೀಶ್ ಭಂಡಾರಿ ಸ್ಪರ್ಧಿಸಿದ್ದಾರೆ ಮತ್ತು ಪುತ್ತಿಲ ಪರಿವಾರದಿಂದ ನಿಡ್ಪಳ್ಳಿ ವಾರ್ಡ್ 2ರಲ್ಲಿ ಜಗನ್ನಾಥ ರೈ ಹಾಗೂ ಆರ್ಯಾಪು ವಾರ್ಡ್ 2ರಲ್ಲಿ ಸುಬ್ರಹ್ಮಣ್ಯ ಬಲ್ಯಾಯ ಸ್ಪರ್ಧಿಸಿದ್ದಾರೆ. ಇಂದು ಪುತ್ತೂರಿನಲ್ಲಿ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಭವಿಷ್ಯ ನಿರ್ಧಾರವಾಗಲಿದೆ.