ಮಂಜೇಶ್ವರ: ಬಿಜೆಪಿ ಮಂಜೇಶ್ವರ ಪಂಚಾಯತ್ ವನಿತಾ ಸಂಗಮ ಕಾರ್ಯಕ್ರಮ ಕಣ್ವ ತೀರ್ಥ ಕಡಪ್ಪರ ದಲ್ಲಿ ಫೆ.19ರಂದು ಜರಗಿತು.
ಯುವ ಮೋರ್ಛಾ ಜಿಲ್ಲಾಧ್ಯಕ್ಷೆ ಅಂಜು ಜೋಸ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚಾಯತ್ ಸದಸ್ಯೆ ವಿನಯ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ ಬಿ ಎಂ, ಕಾರ್ಯದರ್ಶಿ ಜಯಶ್ರೀ ಮಾಡ, ಸತ್ಯಾವತಿ ಕಡಪ್ಪರ, ವೀಣಾ ಎಸ್ ಬೆಂಗರೆ, ವಿದ್ಯಾ ವಸಂತ ಕಣ್ವ ತೀರ್ಥ, ಪುಷ್ಪಲತ, ಶಕುಂತಳ, ಸೀತಮ್ಮ, ಲಕ್ಷ್ಮಣ ಬಿ ಎಂ ಮೊದಲಾದವರು ಉಪಸ್ಥಿತರಿದ್ದರು. ಕುಸುಮ ಟೀಚರ್ ಸ್ವಾಗತಿಸಿ, ವಂದಿಸಿದರು.