ಮುಂಬೈ: ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಅವರು 2023-24ನೇ ಸಾಲಿನ ‘ಸಿಟಿಜನ್ ಆಫ್ ಮುಂಬೈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆರೋಗ್ಯ, ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಮತ್ತು ಕಲಾ ವಿಭಾಗಕ್ಕೆ ನೀತಾ ಅವರ ಕೊಡುಗೆಯನ್ನು ಪರಿಗಣಿಸಿ ಮುಂಬೈನ ರೋಟರಿ ಕ್ಲಬ್ ಈ ಪ್ರಶಸ್ತಿಯನ್ನು ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗನ (IPL) ಅತ್ಯಂತ ಯಶಸ್ವಿ ಕ್ರಿಕೆಟ್ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ನ ಮಾಲೀಕರಾದ ನೀತಾ, ಇಂಡಿಯನ್ ಸೂಪರ್ ಲೀಗ್ ಪ್ರಾರಂಭಿಸಿದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ ಮೆಂಟ್ ಲಿಮಿಟೆಡ್ನ ಸಂಸ್ಥಾಪಕಿ ಮತ್ತು ಅಧ್ಯಕ್ಷರೂ ಆಗಿದ್ದಾರೆ.