ಇನ್ಮುಂದೆ ಸಿಗಲಿದೆ ಮೊಬೈಲ್ ನಲ್ಲಿ ಭೂಕಂಪದ ಎಚ್ಚರಿಕೆ

Share with

ಗೂಗಲ್ ಸೆ.27 ರಂದು ಭಾರತದಲ್ಲಿ ಭೂಕಂಪನ 'ಎಚ್ಚರಿಕೆ' ವ್ಯವಸ್ಥೆಯನ್ನು ಪ್ರಾರಂಭಿಸುವ ಕುರಿತು ಮಾಹಿತಿಯನ್ನು ತಿಳಿಸಿದೆ.

ನವದೆಹಲಿ: ಪ್ರಮುಖ ತಂತ್ರಜ್ಞಾನ ಕಂಪನಿಯಾದ ಗೂಗಲ್ ಸೆ.27 ರಂದು ಭಾರತದಲ್ಲಿ ಭೂಕಂಪನ ‘ಎಚ್ಚರಿಕೆ’ ವ್ಯವಸ್ಥೆಯನ್ನು ಪ್ರಾರಂಭಿಸುವ ಕುರಿತು ಮಾಹಿತಿಯನ್ನು ತಿಳಿಸಿದೆ.

ಕಂಪನಿಯ ಪ್ರಕಾರ, ಈ ಸೇವೆಯು ಮುಂಬರುವ ವಾರದಲ್ಲಿ ಆಂಡ್ರಾಯ್ಡ್ 5 ಮತ್ತು ಅದಕ್ಕಿಂತ ಹೆಚ್ಚಿನದರಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ಗಳಲ್ಲಿ ಸೆನ್ಸರ್‌ಗಳನ್ನು ಬಳಸಿಕೊಂಡು ಭೂಕಂಪವನ್ನು ಅಂದಾಜು ಮಾಡಲು ಮತ್ತು ಅದರ ತೀವ್ರತೆಯನ್ನು ಪತ್ತೆಹಚ್ಚಲು ಈ ಸೇವೆ ಕಾರ್ಯನಿರ್ವಹಿಸುತ್ತದೆ.

ಈ ಸೇವೆಯ ಸಹಾಯದಿಂದ, ಭೂಕಂಪ ಸಂಭವಿಸಿದ ತಕ್ಷಣ ಜನರನ್ನು ಎಚ್ಚರಿಸಲಾಗುತ್ತದೆ. ಇದರಿಂದ ಜನರು ತಮ್ಮ ಜೀವ ಮತ್ತು ಆಸ್ತಿಯನ್ನು ರಕ್ಷಿಸಿಕೊಳ್ಳಬಹುದು. ಈ ವ್ಯವಸ್ಥೆಯು ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳಲ್ಲಿ ಇರುವ ಸಣ್ಣ ‘ಅಕ್ಸೆಲೆರೋಮೀಟರ್’ ಸಹಾಯವನ್ನು ತೆಗೆದುಕೊಳ್ಳುತ್ತದೆ, ಇದು ಮಿನಿ ಭೂಕಂಪಮಾಪಕವಾಗಿ ಕಾರ್ಯನಿರ್ವಹಿಸುತ್ತದೆ.

ಫೋನ್ ಪ್ಲಗ್ ಇನ್ ಮಾಡಿದಾಗ ಮತ್ತು ಚಾರ್ಜ್ ಮಾಡಿದಾಗ, ಅದು ಭೂಕಂಪದ ಆರಂಭವನ್ನು ಕಂಡುಹಿಡಿಯಬಹುದು. ಒಂದೇ ಸಮಯದಲ್ಲಿ ಅನೇಕ ಫೋನ್ ಗಳು ಭೂಕಂಪದಂತಹ ನಡುಕವನ್ನು ಪತ್ತೆ ಹಚ್ಚಿದರೆ, ಭೂಕಂಪ ಸಂಭವಿಸಬಹುದು ಎಂದು ಊಹಿಸಲು ನಮ್ಮ ಸರ್ವರ್ ಈ ಮಾಹಿತಿಯನ್ನು ಬಳಸಬಹುದು. ಸದ್ಯದಲ್ಲೇ ಈ ಕುರಿತಾದ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.


Share with

Leave a Reply

Your email address will not be published. Required fields are marked *