ನೀತಾ ಅಂಬಾನಿಗೆ ಸಿಟಿಜನ್‌ ಆಫ್ ಮುಂಬೈ ಪ್ರಶಸ್ತಿ

Share with

ನೀತಾ ಅಂಬಾನಿ ಅವರು 2023-24ನೇ ಸಾಲಿನ 'ಸಿಟಿಜನ್ ಆಫ್ ಮುಂಬೈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂಬೈ: ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ನೀತಾ ಅಂಬಾನಿ ಅವರು 2023-24ನೇ ಸಾಲಿನ ‘ಸಿಟಿಜನ್ ಆಫ್ ಮುಂಬೈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆರೋಗ್ಯ, ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಮತ್ತು ಕಲಾ ವಿಭಾಗಕ್ಕೆ ನೀತಾ ಅವರ ಕೊಡುಗೆಯನ್ನು ಪರಿಗಣಿಸಿ ಮುಂಬೈನ ರೋಟರಿ ಕ್ಲಬ್ ಈ ಪ್ರಶಸ್ತಿಯನ್ನು ನೀಡಿದೆ.

ಇಂಡಿಯನ್ ಪ್ರೀಮಿಯರ್ ಲೀಗನ (IPL) ಅತ್ಯಂತ ಯಶಸ್ವಿ ಕ್ರಿಕೆಟ್ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್‌ನ ಮಾಲೀಕರಾದ ನೀತಾ, ಇಂಡಿಯನ್ ಸೂಪರ್ ಲೀಗ್ ಪ್ರಾರಂಭಿಸಿದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್ ಮೆಂಟ್ ಲಿಮಿಟೆಡ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷರೂ ಆಗಿದ್ದಾರೆ.


Share with

Leave a Reply

Your email address will not be published. Required fields are marked *