ಉಜಿರೆ: ಸ್ವಚ್ಛತೆ ಆರೋಗ್ಯ ಸಂರಕ್ಷಣೆಯ ಒಂದು ಪ್ರಮುಖ ಅಂಗ. ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ಮೋದಿಯವರ ಆಶಯದಂತೆ ಉಜಿರೆಯ ಸಂಘ ಸಂಸ್ಥೆಗಳು ನಗರದ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಇದು ಒಂದು ದಿನಕ್ಕೆ ಮೀಸಲಾಗಿರದೆ ನಿತ್ಯ ನಮ್ಮ ಮನೆ, ಅಂಗಡಿ, ವಠಾರದ ಸ್ವಚ್ಛತೆಗೆ ಪ್ರತಿಯೊಬ್ಬರೂ ಪ್ರಾಶಸ್ತ್ಯ ನೀಡಬೇಕು.
ನಮ್ಮ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಮನಸ್ಸು ಪರಿಶುದ್ಧವಾಗಿರುತ್ತದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು. ಅವರು ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಉಜಿರೆಯ ಮುಖ್ಯ ವೃತ್ತದಲ್ಲಿ ವಿವಿಧ ಸಂಘಟನೆಗಳ ಸಹಯೋಗದಿಂದ ಹಮ್ಮಿಕೊಳ್ಳಲಾದ “ಸ್ವಚ್ಛತಾ ಹಿ ಸೇವಾ ” ಯೋಜನೆಯನ್ವಯ ನಗರದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಜಿರೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶಾರದೋತ್ಸವ ಸಮಿತಿ, ಬೆಳ್ತಂಗಡಿ ರೋಟರಿ ಕ್ಲಬ್, ಬೆಳ್ತಂಗಡಿ ಲಯನ್ಸ್ ಕ್ಲಬ್, ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್, ಅಮೃತ್ ಟೆಕ್ಸ್ಟೈಲ್ಸ್ ಮತ್ತಿತರ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಚತಾ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಮಾತನಾಡಿ ಊರ ನಾಗರಿಕರು ಮತ್ತು ವರ್ತಕರು ತಮ್ಮ ಮನೆ, ವ್ಯಾಪಾರ ಕೇಂದ್ರದ ಪರಿಸರವನ್ನು ತಾವೇ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಪಂಚಾಯತ್ ವಾಹನಕ್ಕೆ ನೀಡಿ, ವ್ಯಾಪಾರ ಮಳಿಗೆಯವರು ಕಸದ ತೊಟ್ಟಿಯನ್ನಿರಿಸಿ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಸಹಕರಿಸಬೇಕು. ಸಾರ್ವಜನಿಕರೂ ಸ್ವಚ್ಛತೆಯನ್ನು ಪಾಲಿಸಿ ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.
ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಟೀಚರ್ಸ್ ಬ್ಯಾಂಕಿನ ಪ್ರಬಂಧಕ ರವೀಂದ್ರ ಶೆಟ್ಟಿ ಬಳಂಜ, ಜಗದೀಶ್ ಪ್ರಸಾದ್, ಪ್ರಶಾಂತ್ ಜೈನ್, ದೇವಪ್ಪ ಗೌಡ, ರಾಮಣ್ಣ ಗೌಡ, ಗೋಪಾಲಕೃಷ್ಣ ಜಿ.ಕೆ, ಅಬೂಬಕ್ಕರ್, ಹುಕುಂ ರಾಮ್ ಪಟೇಲ್, ಪ್ರಭಾಕರ ಹೆಗ್ಡೆ , ಲಕ್ಷ್ಮಣ ಗೌಡ, ಪ್ರಸಾದ್ ಬಿ.ಎಸ್, ನಾಗೇಶ್ಅ ಭಟ್, ಅಮೃತ್ ಟೆಕ್ಸ್ಟೈಲ್ಸ್ ನ ಸಿಬ್ಬಂದಿ ವರ್ಗ ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು. ಸುಮಾರು ಒಂದು ಗಂಟೆ ಕಾಲ ಉಜಿರೆ ಪೇಟೆಯ ಸ್ವಚ್ಛತಾ ಕಾರ್ಯ ನಡೆಸಿದರು. ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿ, ಪ್ರಸಾದ್ ಬಿ.ಎಸ್ ವಂದಿಸಿದರು .