ಬಂಟ್ವಾಳ: ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಒಂದೇ ದಿನ ಅವರಿಗೆ ಅಭಿನಂದಿಸುವ ಮೂಲಕ ವಿವಿಧ ದಿನಾಚರಣೆಯಲ್ಲೂ ಏಕತೆಯನ್ನು ತರುವ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆ ಕಾರ್ಯ ಅಭಿನಂದನದಾಯಕವಾಗಿದೆ ಎಂದು ಡಾ ರಮೇಶಾನಂದ ಸೋಮಯಾಜಿರವರು ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ವತಿಯಿಂದ ಸೆ.30ರಂದು ರೋಟರಿ ಸಮುದಾಯ ಭವನ ಬಿ ಸಿ ರೋಡ್ ಇಲ್ಲಿ ಜರಗಿದ ವಿವಿಧ ದಿನಾಚರಣೆಗಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಂಟ್ವಾಳ ಸಿಟಿ ಯ ಅಧ್ಯಕ್ಷ ರೋ ಗಣೇಶ್ ಶೆಟ್ಟಿ ಗೋಲ್ತಮಜಲ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ದಿನಾಚರಣೆಗಳಾದ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಬಟ್ಯಪ್ಪ ಶೆಟ್ಟಿ ನೆಟ್ಲ, ಕಾರ್ಗಿಲ್ ದಿನಾಚರಣೆ ಪ್ರಯುಕ್ತ ಯೋಧ ವಿದ್ಯಾದರ್ ಪೂಜಾರಿ, ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಪೃಥ್ವಿರಾಜ್, ಸುಧೀರ್ ಶೆಟ್ಟಿ, ಸುಪ್ರಿಯ ರಮೇಶ್, ಸಂದೀಪ್ ಶೆಟ್ಟಿ, ನಿಶಾಂತ್ ರೈ, ಸುಭಾಶ್ ರೈ, ಜ್ಯೋತ್ಸ್ನಾ ಗೌತಮ್, ಸೂರಜ್, ಶಿಕ್ಷಕರ ದಿನಾಚರಣೆಯ ಪ್ರಯುಕ್ತ 2023ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗೋಪಾಲ್ ನೆರಳಕಟ್ಟೆ, ಸಂಧ್ಯಾ ವಿದ್ಯಾಧರ್, ವಾಣಿ ಭಾಸ್ಕರ್ ರಾವ್, ವಿಜಯಲಕ್ಷ್ಮಿ, ಭಾರತಿ, ಟಿ.ಶೇಷಪ್ಪ ಮೂಲ್ಯ ಇವರನ್ನು ಛಾಯಾಗ್ರಾಹಕರ ದಿನಾಚರಣೆಯ ಪ್ರಯುಕ್ತ ಚಿನ್ನ ಕಲ್ಲಡ್ಕ, ವೈದ್ಯರ ದಿನಾಚರಣೆ ಪ್ರಯುಕ್ತ ಡಾ.ರಮೇಶಾನಂದ ಸೋಮಯಾಜಿ, ಡಾ ಅಶ್ವಿನ್ ಸಾಗರ್, ಡಾ.ವಾಮನ್ ನಾಯಕ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಪ್ರಥಮ್ ಹಾಗೂ ಪರಿಕ್ಷಿತ್ ರೈ ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮನೆ ಕಟ್ಟಲು ಹತ್ತು ಸಾವಿರ ಹಾಗೂ ರೋಗಿಗೆ ಡಯಾಲಿಸಿಸ್ ಬಗ್ಗೆ ಹದಿನೈದು ಸಾವಿರ ಧನಸಹಾಯ ನೀಡಲಾಯಿತು. ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆಗೆ 12 ನೂತನ ಸದಸ್ಯರು ಸೇರ್ಪಡೆ ಗೊಳಿಸಲಾಯಿತು. ವೇದಿಕೆಯಲ್ಲಿ ಲಾರೆನ್ಸ್ ಗೊನ್ಸಲೀಸ್, ಸುರೇಂದ್ರ ಕಿಣಿ, ಸತೀಶ್ ಕುಮಾರ್.ಕೆ, ಪದ್ಮನಾಭ ರೈ, ಶಾಂತರಾಜ್, ಉಪಸ್ಥಿತರಿದ್ದರು. ಅನ್ಸ್ ಕರ್ಕೇರ ಹಾಗೂ ಆಸ್ಮಿ ಕರ್ಕೇರ ಪ್ರಾರ್ಥಿಸಿ ಮಧುಸೂದನ್ ವಂದಿಸಿ, ಶೇಷಪ್ಪ ಮೂಲ್ಯ ಹಾಗೂ ಭಾರತೀ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.