ಪಡುಕುತ್ಯಾರು: ಇಲ್ಲಿನ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳವರ 14ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯುತ್ಸವವುಇದೇ ಬರುವ ಜೂನ್ 1 ಮತ್ತು 2 ರಂದು ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ನಡೆಯಲಿದೆ.
ಜೂನ್ 1 ರಂದು ವರ್ಧಂತಿ ಉತ್ಸವದ ಅಂಗವಾಗಿ ಸಾಮೂಹಿಕ ಚಂಡಿಕಾಯಾಗ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ವಾಸ್ತುಶಿಲ್ಪ ಮತ್ತು ಶಿಲ್ಪ ಕಲೆ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಪ್ರಧಾನ,ಯುವಶಿಲ್ಪಿಗಳಿಗೆ ಅಭಿನಂದನೆ ನಡೆಯಲಿದೆ.
ಜೂನ್ 2ರಂದು ವಿಶ್ವಕರ್ಮ : ಸಾಂಸ್ಕೃತಿಕ ಪರಂಪರೆಯ ನಿರ್ಮಾತೃ ಇತಿಹಾಸದ ಪುನರಾವಲೋಕನ ಭವಿಷ್ಯದ ಅನಾವರಣ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಕರ್ನಾಟಕ, ಕೇರಳ,ತಮಿಳುನಾಡು,ಗೋವಾ, ಆಂಧ್ರ ಪ್ರದೇಶ,ಹಿಮಾಚಲ ಪ್ರದೇಶ,ಮಣಿಪುರ ಗುಜರಾತ್,ಪಂಜಾಬ್ ಹಾಗೂ ರಾಜಸ್ಥಾನ ಎಂಬಿ ರಾಜ್ಯಗಳಿಂದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಮಹಾ ಸಂಸ್ಥಾನದಲ್ಲಿ ಹಾಗೂ ಆನ್ಲೈನ್ ನಲ್ಲಿ ಸಭೆಗಳನ್ನು ನಡೆಸಿ ಕಾರ್ಯಕ್ರಮದ ಯಶಸ್ಸಿಗೆ ತೊಡಗಿಸಿಕೊಂಡಿದ್ದಾರೆ.
ಎಸ್ ಕೆ ಎಫ್ ಅಧ್ಯಕ್ಷ ಡಾ. ಜಿ ರಾಮಕೃಷ್ಣ ಆಚಾರ್ ಮೂಡುಬಿದ್ರಿ ಇವರ ನೇತೃತ್ವದ ವಿಚಾರ ಸಂಕಿರಣದ ಪೋಷಕ ಸಮಿತಿ
ಆನೆಗುಂದಿ ಪ್ರತಿಷ್ಠಾನ ಹಾಗೂ ವ್ಯಾಪ್ತಿಯ 21 ಕಾಳಿಕಾಂಬಾ ದೇವಸ್ಥಾನಗಳು, ಆನೆಗುಂದಿ ಮೂಲ ಮಠ, ವಿಶ್ವಕರ್ಮ ಒಕ್ಕೂಟ ಮತ್ತು ಸಹ ಟ್ರಸ್ಟ್ ಗಳಾದ ಅಸೆಟ್,ಗೋವು ಪರ್ಯಾವರಣ್ ಟ್ರಸ್ಟ್ ,ಆನೆಗುಂದಿ ಗುರು ಸೇವಾ ಪರಿಷತ್ತು,ಶ್ರೀ ಸರಸ್ವತಿ ಮಾತೃ ಮಂಡಳಿ,ಶ್ರೀ ಸರಸ್ವತೀ ಪೂರ್ವ ಛಾತ್ರಾ ಸಂಘ ಇವುಗಳನ್ನು ಒಳಗೊಂಡ ಸಂಘಟನಾ ಸಮಿತಿ, ಶ್ರೀ ವಿ.ಶ್ರೀಧರ ಆಚಾರ್ಯ ವಡೇರ ಹೋಬಳಿ ನೇತೃತ್ವದ ಕಾರ್ಯನಿರ್ವಹಣಾ ಸಮಿತಿ
ಶ್ರೀ ಜಯಕರ ಆಚಾರ್ಯ ಕರಂಬಳ್ಳಿ,ಶ್ರೀ ಜನಾರ್ದನ ಆಚಾರ್ಯ ಬಜಕೂಡ್ಲು, ನೇತೃತ್ವದ ಸ್ವಾಗತ ಸಮಿತಿ, ಶ್ರೀ ನಾಗರಾಜ ಆಚಾರ್ಯ ಕಾಡಬೆಟ್ಟು,ಶ್ರೀ ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು, ಶ್ರೀ ಹರೀಶ ಆಚಾರ್ಯ ಕಾರ್ಕಳ ನೇತೃತ್ವದ ವಸತಿ- ಸಾರಿಗೆ ಸಮಿತಿ,ಶ್ರೀ ಶ್ರೀಧರ ಜೆ ಆಚಾರ್ಯ ಕಟಪಾಡಿ,ಶ್ರೀ ಸುರೇಶ್ ಆಚಾರ್ಯ ಇರಂದಾಡಿ ನೇತೃತ್ವದ ಕಾರ್ಯಾಲಯ ಸಮಿತಿ,ಶ್ರೀ ಸುದೀಶ್ ಆಚಾರ್ಯ ಕಾಸರಗೋಡು, ಶ್ರೀ ಮೌನೇಶ್ ಆಚಾರ್ಯ ಜೆಪಿ ನಗರ ಕಾಸರಗೋಡು ನೇತೃತ್ವದ ನೋಂದಣಿ ಸಮಿತಿ, ಡಾ. ಗೋಪಾಲಕೃಷ್ಣ ಕೆ ಆಚಾರ್ಯ ನವದೆಹಲಿ ನೇತೃತ್ವದ ನಡಾವಳಿ ಸಮಿತಿ, ಶ್ರೀ ಬಿ.ಎ ಆಚಾರ್ಯ ಮಣಿಪಾಲ, ಶ್ರೀ ಗಣೇಶ್ ಕುಮಾರ್ ಮುಂಬೈ, ನೇತೃತ್ವದ ದಾಖಲೀಕರಣ ಸಮಿತಿ,ನ್ಯಾಯವಾದಿ ಕೆಎಂ ಗಂಗಾಧರ ಆಚಾರ್ಯ ಕೊಂಡೆವೂರು, ಶ್ರೀಮತಿ ಗೀತಾಚಂದ್ರ ಕಾರ್ಕಳ ನೇತೃತ್ವದ ಪ್ರಮಾಣ ಪತ್ರ ಸಮಿತಿ,ಸುರೇಶ್ ಡಿ ಆಚಾರ್ಯ ಕಟಪಾಡಿ,ಸುರೇಶ್ ಆಚಾರ್ಯ ನಿಟ್ಟೆ ಕಾರ್ಕಳ ನೇತೃತ್ವದ ತಾಂತ್ರಿಕ ಸಮಿತಿ, ಶ್ರೀ ಕನ್ಯಾನ ಜನಾರ್ದನ ಆಚಾರ್ಯ, ಶ್ರೀ ಸತೀಶ್ ಆಚಾರ್ಯ ಸುರಳಿ ನೇತೃತ್ವದ ಸಾಂಸ್ಕೃತಿಕ ಸಮಿತಿ, ಶ್ರೀ ಬಿ ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ ,ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠ ಹಳೆಯಂಗಡಿ ಇವರ ನೇತೃತ್ವದ ಧ್ವನಿವರ್ಧಕ ದೀಪಾಲಂಕಾರ ಸಮಿತಿ, ಡಾ.ಎಸ್ ಪಿ ಗುರುದಾಸ್ ಮಂಗಳೂರು,ಶ್ರೀಮತಿ ರಮ್ಯಾ ಲಕ್ಷ್ಮೀಶ್ ಆಚಾರ್ಯ ಮಂಗಳೂರು ನೇತೃತ್ವದ ವಸ್ತು ಪ್ರದರ್ಶನ ಸಮಿತಿ, ಶ್ರೀ ವೈ ಧರ್ಮೇಂದ್ರ ಆಚಾರ್ಯ ಕಾಸರಗೋಡು, ಶ್ರೀ ಸೀತಾರಾಮ ಆಚಾರ್ಯ ಬೆಳುವಾಯಿ, ಶ್ರೀ ಯೋಗೀಶ್ ಆಚಾರ್ಯ ಕರಂಬಳ್ಳಿ ನೇತೃತ್ವದ ಮಾಧ್ಯಮ ಸಮಿತಿ, ಶ್ರೀ ಗುರುರಾಜ್ ಕೆ ಜೆ ಮಂಗಳೂರು, ಶ್ರೀ ರವೀಂದ್ರ ಮಂಗಳಾದೇವಿ ನೇತೃತ್ವದ ವೇದಿಕೆ ಸಮಿತಿ, ಶ್ರೀ ಪ್ರಶಾಂತ್ ಆಚಾರ್ಯ ಕಟಪಾಡಿ, ಶ್ರೀ ಮಧುಸೂದನ ಆಚಾರ್ಯ ಕಾಸರಗೋಡು ನೇತೃತ್ವದ ಆಹಾರ ಸಮಿತಿ ಆಹಾರ ಸಮಿತಿ, ಡಾ. ಅಶ್ವಿನ್ ಕುಮಾರ್ ಉಡುಪಿ,ಡಾ ಪ್ರೀತಾ ಉಡುಪಿ ಡಾ. ಜ್ಯೋತಿ ಆಚಾರ್ಯ ಕೆಳಾರ್ಕಳಬೆಟ್ಟು, ಶ್ರೀಮತಿ ಶಾಲಿನಿ ಜಯಕರ ಆಚಾರ್ಯ ಕರಂಬಳ್ಳಿ, ವೈದ್ಯಕೀಯ ತುರ್ತು ಚಿಕಿತ್ಸೆ ಸಮಿತಿ,ಆನೆಗುಂದಿ ಗುರು ಸೇವಾ ಪರಿಷತ್ ಮಂಡಲ ಮಹಾಮಂಡಲ ಸದಸ್ಯರು,ಸರಸ್ವತೀ ಮಾತೃ ಮಂಡಳಿಯ ಸದಸ್ಯರ ಸ್ವಯಂಸೇವಕ ಸಮಿತಿ ಇವುಗಳನ್ನು ಕಾರ್ಯಕ್ರಮದ ಯಶಸ್ವಿಗಾಗಿ ರಚಿಸಲಾಗಿದೆ. ಡಾ. ಶ್ರೀಕಂಠಚಾರ್ ಮೈಸೂರು ಹಾಗೂ ಡಾ. ಬಾಲಕೃಷ್ಣ ಬಿ ಎಂ ಹೊಸಂಗಡಿ ಇವರು ವಿಚಾರ ಸಂಕಿರಣದ ಸಂಯೋಜಕರಾಗಿದ್ದಾರೆ.
ಈ ಬಗ್ಗೆ ನಡೆದ ವಿಶೇಷ ಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿ ಶ್ರೀಧರ ಆಚಾರ್ಯ ವಡೇರ ಹೋಬಳಿ ವಹಿಸಿದ್ದರು. ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳವರು ಆಶೀರ್ವಚನ ನೀಡಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ಆನೆಗುಂದಿ ಮೂಲ ಮಠದ ಅಧ್ಯಕ್ಷ ಶ್ರೀ ದಿನೇಶ್ ಆಚಾರ್ಯ ಪಡುಬಿದ್ರಿ, ಸಹ ಟ್ರಸ್ಟ್ ಗಳ ಪದಾಧಿಕಾರಿಗಳಾದ ಶ್ರೀ ಬಿ ಸೂರ್ಯಕುಮಾರ್ ಹಳೆಯಂಗಡಿ, ಶ್ರೀ ಸುಂದರ ಆಚಾರ್ಯ ಬೆಳುವಾಯಿ,ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ, ಮೋಹನ್ ಕುಮಾರ್ ಬೆಳ್ಳೂರು, ಪ್ರಭಾಕರ ಆಚಾರ್ಯ ಕೋಟೆಕಾರು, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ,ಶ್ರೀ ದಿನೇಶ್ ಆಚಾರ್ಯ ಕಿನ್ನಿಗೋಳಿ,ಶ್ರೀ ಬಿ ಯಜ್ಞೇಶ ಆಚಾರ್ಯ ಮಂಗಳೂರು, ಶ್ರೀ ಮೋಹನ್ ಕುಮಾರ್, ಬೆಳ್ಳೂರು,ಶ್ರೀಮತಿ ರಮಾ ನವೀನ್ ಕಾರ್ಕಳ,ಶ್ರೀ ಜನಾರ್ಧನ ಆಚಾರ್ಯ ಆರಿಕ್ಕಾಡಿ,ಶ್ರೀ ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಶ್ರೀ ಕೆ ರಾಘವೇಂದ್ರ ಆಚಾರ್ಯ ಉಡುಪಿ,ಶ್ರೀ ವಿಠಲ ಆಚಾರ್ಯ ಎಲ್ಲೂರು, ಬ್ರಹ್ಮಶ್ರೀ ಅಕ್ಷಯ ಶರ್ಮ ಕಟಪಾಡಿ,ಶ್ರೀ ವಾದಿರಾಜ ಆಚಾರ್ಯ ಮಂಗಳೂರು,ಶ್ರೀ ಬಾಲಕೃಷ್ಣ ಆಚಾರ್ಯ ಮೂಡಬಿದ್ರೆ,ಶ್ರೀ ಶಿವರಾಮ ಆಚಾರ್ಯ ಉಳಿಯ ಶ್ರೀ ಗಣೇಶ್ ಆಚಾರ್ಯ ಕೋಟ,ಶ್ರೀಪುರುಷೋತ್ತಮ ಆಚಾರ್ಯ ಬದಿಯಡ್ಕ ಶ್ರೀ ವಸಂತ ಆಚಾರ್ಯ ಮಜೂರು ಮುಂತಾದವರು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು ಸಭೆಯನ್ನು ನಿರ್ವಹಿಸಿದರು.