ಲೋನ್‌ ಆ್ಯಪ್‌ನಲ್ಲಿ ಸಾಲ ಪಡೆದ ವ್ಯಕ್ತಿಯ ಮಾನಹರಣ, ದೂರು

Share with

loan  scam

ಮಂಗಳೂರಿನಲ್ಲಿ ಲೋನ್‌ ಆ್ಯಪ್‌ನಲ್ಲಿ 4,200 ರೂಪಾಯಿ ಸಾಲ ಪಡೆದ ವ್ಯಕ್ತಿಯ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ವೈರಲ್‌ ಮಾಡಿದ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿರ್ಯಾದಿದಾರರು ಲೋನ್‌ ಆ್ಯಪ್‌(Loan app) ಹಾಕಿ 3,500 ರೂ ಸಾಲಕ್ಕೆ ಅರ್ಜಿ ಹಾಕಿದ್ದು, ಅವರ ಬ್ಯಾಂಕ್‌ ಖಾತೆಗೆ 2,800 ರೂ ಜಮೆಯಾಗಿತ್ತು. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಾಗಿದ್ದುದರಿಂದ ಜು.19ರಂದು ಬ್ಯಾಂಕ್‌ ಖಾತೆಯಿಂದ 1,400 ರೂ ಪಾವತಿ ಮಾಡಿದ್ದು, ಉಳಿದ ಹಣವನ್ನು ಜು.26ರಂದು ಲೋನ್ ಆ್ಯಪ್‌ ಕಡೆಯಿಂದ ವಾಟ್ಸಪ್‌ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಹಂತ ಹಂತವಾಗಿ 4,200 ರೂ ಪಾವತಿ ಮಾಡಿದ್ದರು. ಇದಾದ ಬಳಿಕ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ತಂದೆಯ, ಸಂಬಂಧಿಕರ ಹಾಗೂ ಕಾಲೇಜಿನ ಅಧ್ಯಾಪಕರ ವಾಟ್ಸಪ್‌ ನಂಬರ್‌ಗಳಿಗೆ ಭಾವಚಿತ್ರವನ್ನು ಮತ್ತು ಪಿರ್ಯಾದಿದಾರರ ಸಂಪರ್ಕದಲ್ಲಿರುವ ಇತರರ ಭಾವಚಿತ್ರವನ್ನು ಅಶ್ಲೀಲ ಭಾವಚಿತ್ರದೊಂದಿಗೆ ಎಡಿಟ್ ಮಾಡಿ ಹಾಕಿ ಲೋನ್‌ ಪಾವತಿ ಮಾಡಿರುವುದಿಲ್ಲ ಎಂದು ಅಶ್ಲೀಲ ಸಂದೇಶವನ್ನು ರವಾನೆ ಮಾಡಿದ್ದರು.

ಪಿರ್ಯಾದಿದಾರರು ಲೋನ್‌ ತೆಗೆಯುವ ಆ್ಯಪ್‌ನ್ನು ಇನ್‌ಸ್ಟಾಲ್‌ ಮಾಡುವ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಮೊಬೈಲ್‌ನಲ್ಲಿ ಶೇಖರಣೆಗೊಂಡಿದ್ದ ಕಾಂಟ್ಯಕ್ಟ್ ನಂಬರ್‌ಗಳನ್ನು ಪಿರ್ಯಾದಿದಾರರಿಗೆ ಅರಿವಿಲ್ಲದೇ ಶೇಖರಿಸಿಕೊಂಡಿದ್ದರು. ಬಳಿಕ ಪಿರ್ಯಾದಿದಾರರಿಗೆ ತೊಂದರೆ ನೀಡುವ ಉದ್ದೇಶದಿಂದ ಭಾವಚಿತ್ರವನ್ನು ಹಾಗೂ ಸಂಪರ್ಕದಲ್ಲಿರುವ ಇತರರ ಭಾವಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವಾಟ್ಸಾಪ್‌ ಮೂಲಕ ವೈರಲ್‌ ಮಾಡಿದ್ದಾರೆ. ಈ ಘಟನೆಯ ಅನುಸಾರ ಪಿರ್ಯಾದಿದಾರರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.


Share with

Leave a Reply

Your email address will not be published. Required fields are marked *