ಮಾದಕ ವ್ಯಸನ: ಮಜಿ ಸರಕಾರಿ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ

Share with

ಕಲ್ಲಡ್ಕ ಸೆ 16, ದುಶ್ಚಟಗಳಿಗೆ ವ್ಯಸನರಾಗಿ ಅದೆಷ್ಟೋ ಜೀವಗಳು ಬಲಿಯಾಗಿವೆ, ದುಷ್ಟಗಳಿಂದ ದೂರವಿರಲು ಹಾಗೂ ಅವುಗಳ ದಾಸರಾಗದಂತೆ ತನ್ನ ಎಳವೆಯಲ್ಲೇ ಈ ಕುರಿತಾದ ಉತ್ತಮ ಸಂಸ್ಕಾರಯುತವಾದ ಗುಣಮಟ್ಟದ ಕಲಿಕೆ, ಉತ್ತಮ ಗೆಳೆತನ, ಇದಕ್ಕೆ ಕಾರಣವಾಗಿದೆ.

ತನ್ನ ಪರಿಸರದಲ್ಲಿ ವ್ಯಸನಕ್ಕೆ ಬಲಿಯಾದ ಜನರ ಬಗ್ಗೆ ಕಾಳಜಿವಹಿಸಿ ಅವರನ್ನು ಸರಿದಾರಿಗೆ ತರಲು ನಿಧಿ೯ಷ್ಟ ಸಂಸ್ಥೆಗಳಿಗೆ ದೂರು ನೀಡಬೇಕು, ಶಾಲಾ ಪರಿಸರ ಮತ್ತು ಮನೆಯಲ್ಲಿ ಈ ಬಗ್ಗೆ ಕಂಡುಬಂದಾಗ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು, ಎಂಬುದಾಗಿ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂಭ್ರಮ ಶನಿವಾರ ಕಾಯ೯ಕ್ರಮದಲ್ಲಿ ಮಾದಕ ವಸ್ತುಗಳ ದುಬ೯ಳಕೆ ತಡೆಗಟ್ಟುವಿಕೆ ಮತ್ತು ನಿವ೯ಹಣೆ ಕುರಿತಾಗಿ ವಿಟ್ಲ ಆರಕ್ಷಕಠಾಣೆ ವ್ಯಾಪ್ತಿಯ ವೀರಕಂಭ ಗ್ರಾಮ ಬೀಟ್ ಪೊಲೀಸ್ ಮನೋಜ್ ರವರು ತಿಳಿಸಿದರು.

ವೇದಿಕೆಯಲ್ಲಿ ಕಲ್ಲಡ್ಕ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ,ಉಪಸ್ಥಿತರಿದ್ದರು ಕಾರಕ್ರಮದಲ್ಲಿ ಶಾಲಾ ,ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

ಮಾಹಿತಿ ಕಾಯಾ೯ಗಾರದ ಬಳಿಕ ವಿದ್ಯಾಥಿ೯ಗಳು ಮಾದಕ ವ್ಯಸನದ ಬಗ್ಗೆ ಪ್ರಹಸನ ನೀಡಿದರು.
ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಸ್ವಾಗತಿಸಿ ವಂದಿಸಿದರು.


Share with

Leave a Reply

Your email address will not be published. Required fields are marked *