ಎಣ್ಮಕಜೆ ಬಂಟ್ಸ್ ಸರ್ವಿಸ್ ಸೊಸೈಟಿಯಿಂದ ಬಂಟರ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Share with

ಪೆರ್ಲ: ಎಣ್ಮಕಜೆ ಪಂಚಾಯತು ಬಂಟ್ಸ್ ಸರ್ವಿಸ್ ಸೊಸೈಟಿಯಿಂದ ನಡೆಸಲ್ಪಡುವ ಬಂಟರ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಸೊಸೈಟಿಯ ಕಚೇರಿಯಲ್ಲಿ ಜರಗಿತು.

ಎಣ್ಮಕಜೆ ಬಂಟ್ಸ್

ಸಮಿತಿ ಅಧ್ಯಕ್ಷ ನಾರಾಯಣ ಆಳ್ವ ,ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ,ಸದಾನಂದ ಶೆಟ್ಟಿ ಕುದ್ವ, ಚಿದಾನಂದ ಆಳ್ವ,ಬಿ.ಎಸ್. ಗಾಂಭೀರ,ರಮೇಶ್ವಂದ್ರ ರೈ,
ತಾರಾನಾಥ ರೈ,ರಾಜಾರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ,ಕೊರಗಪ್ಪ ರೈಮೊದಲಾದವರು ಬಿಡುಗಡೆ ಸಂದರ್ಭ ಉಪಸ್ಥಿತರಿದ್ದರು. ಸೆ.10ರಂದು ಇಡಿಯಡ್ಕ ಶ್ರೀದುರ್ಗಾಪರಮೇಶ್ವರೀ ಉಳ್ಳಾಲ್ತಿ ಕ್ಷೇತ್ರದ ಸಭಾಂಗಣದಲ್ಲಿ ಬಂಟರ ಕೂಟ ನಡೆಯಲಿದ್ದು ಬಂಟ ಸಮಾಜದವರಿಗಾಗಿ ವಿವಿಧ ಸ್ಪರ್ಧೆಗಳು, ಸಭಾ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಯಕ್ಷಗಾನ ಪ್ರದರ್ಶನ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *