ಆ.25: ಪುತ್ತೂರು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ವರಮಹಾಲಕ್ಷ್ಮೀ ಪೂಜೆ, ಶ್ರಾವಣ ಸಂಭ್ರಮ ಕಾರ್ಯಕ್ರಮ; ಕುಣಿತ ಭಜನಾ ಸ್ಪರ್ಧೆ

Share with

ಪುತ್ತೂರು : ಇಲ್ಲಿನ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮಂದಿರ, ಮತ್ತು ಮಹಿಳಾ ಬಿಲ್ಲವ ವೇದಿಕೆ ಪುತ್ತೂರು ಇದರ ವತಿಯಿಂದ ಆ.25ರ ಶ್ರಾವಣ ಶುಕ್ರವಾರದಂದು ಬಿಲ್ಲವ ವೇದಿಕೆ ಪುತ್ತೂರಿನಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯು ಬೆಳಿಗ್ಗೆ 9.00 ಗಂಟೆಗೆ ಆರಂಭಗೊಳ್ಳಲಿದೆ.

ಕುಣಿತ ಭಜನಾ ಸ್ಪರ್ಧೆ

ವೃತಾಚರಣೆ ಮಾಡುವವರು ಸೀರೆ, ಹಸಿರು ಬಳೆ, ಕುಂಕುಮ, ದಾರವನ್ನು ನೀಡಲಾಗುವುದು. ಬಳಿಕ 12.00 ಗಂಟೆಗೆ ಸಭಾ ಕಾರ್ಯಕ್ರಮವು ಜರುಗಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ವಿಮಲಾ ಸುರೇಶ್, ಉದ್ಘಾಟಕರಾಗಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜೆಯವರು ವಹಿಸಲಿದ್ದಾರೆ.

ಕಾರ್ಯಕ್ರಮದ ಅತಿಥಿಗಳಾಗಿ ಪುತ್ತೂರು ಮುಖ್ಯಕಾರ್ಯ ನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ ,ಪುತ್ತೂರು B. R. C ತನುಜಾ, ಉಪ್ಪಿನಂಗಡಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಿವೇದಿತಾ ದಡ್ದು, ಡಾ|| ಕೆ. ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಡಾ|| ಚಾಂದಿನಿ ಕಾರ್ಯಕ್ರಮದಲ್ಲಿ ಭಾಗಹಿಸಲಿದ್ದಾರೆ.

ಕುಣಿತ ( ನೃತ್ಯ) ಭಜನಾ ಸ್ಪರ್ಧೆ: ಮದ್ಯಾಹ್ನ ಭೋಜನದ ಬಳಿಕ 2.00 ಗಂಟೆಗೆ ಶ್ರಾವಣ ಸಂಭ್ರಮ ಕಾರ್ಯಕ್ರಮ ಜರುಗಲಿದೆ. ವಿವಿಧ ಭಜನಾ ತಂಡಗಳಿಂದ ವೈವಿಧ್ಯಮಯ ಕುಣಿತ ( ನೃತ್ಯ) ಭಜನಾ ಸ್ಪರ್ಧೆ ನಡೆಯಲಿರುವುದು. ಕುಣಿತಾ ಭಜನೆಗೆ ಹೆಸರನ್ನು ನೋಂದಾಯಿಸುವವರು 22/08/2023 ರೊಳಗೆ ಹೆಸರನ್ನು ನೊಂದಾಯಿಸಿಕೊಳ್ಳುವುದು. ಜಾತಿ, ಭೇದ, ಮತ ಭಾವನೆಗಳ ಯಾವುದೇ ವ್ಯಾಪ್ತಿ ಇಲ್ಲದೇ ಎಲ್ಲರೂ ತಂಡದಲ್ಲಿ ಭಾಗಿಗಳಾಗಬಹುದು. ತಂಡದ ಸದಸ್ಯರ ಮಿತಿ ಇರುವುದಿಲ್ಲ, 10 ನಿಮಿಷಗಳ ಕಾಲಾವಕಾಶ ಇದ್ದು ಭಜನಾ ಪರಿಕರಗಳಾದ ತಬಲಾ, ತಾಳ, ಕ್ಯಾಸೆಟ್ಗಳನ್ನೂ ಬಳಸಬಹುದು. ಯಾವುದೇ ಪರಿಕರಗಳನ್ನು ಬಳಸಿದರೂ ತಮ್ಮ ನೃತ್ಯ ( ಕುಣಿತ) ಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ತಮ್ಮ ಹೆಸರನ್ನು ಬಿಲ್ಲವ ಸಂಘ ಪುತ್ತೂರು ಇಲ್ಲಿ ನೀಡಬಹುದು. ಎಂದು ಮಹಿಳಾ ವೇದಿಕೆ ಅಧ್ಯಕ್ಷೆ ವಿಮಲಾ ಸುರೇಶ್ ಹಾಗೂ ಸಂಚಾಲಕಿ ಉಷಾ ಅಂಚನ್ ರವರು ಪ್ರಕಟಣೆಯಲ್ಲಿ ತಿಳಿಸಿರುತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಉಷಾ ಅಂಚನ್: 91418 57566
ವಿಮಲಾ ಸುರೇಶ್: 97409 41519


Share with

Leave a Reply

Your email address will not be published. Required fields are marked *