ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ಉದ್ಯಮಶೀಲತಾ ಕಾರ್ಯಗಾರ‌

Share with

ಪೆರ್ಲ: ಕೇರಳ ಸರಕಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಎಣ್ಮಕಜೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಉದ್ಯಮಶೀಲತಾ ಮಾಹಿತಿ ಕಾರ್ಯಗಾರ ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಎಣ್ಮಕಜೆ ಗ್ರಾ.ಪಂ.ನ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ 2023-24ನೇ ಆರ್ಥಿಕ ವರ್ಷವನ್ನು ಉದ್ಯಮಶೀಲ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಇಡೀ ರಾಜ್ಯದಲ್ಲಿ 1ಲಕ್ಷ ಉದ್ದೀಮೆಗಳನ್ನು ಆರಂಭಿಸುವ ಗುರಿಯನ್ನು ರಾಜ್ಯ ಸರಕಾರ ಇರಿಸಿದ್ದು ಇದರಂತೆ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಕೈಗಾರಿಕಾ ಇಲಾಖೆಯ ಸಹಕಾರದಲ್ಲಿ ವಿಪುಲ ಉದ್ದಿಮೆಗಳನ್ನು ಸ್ಥಾಪಿಸುವ ಯೋಜನೆ ಇರಿಸಲಾಗಿದೆ. ಇದಕ್ಕಿರುವ ಆರ್ಥಿಕ ನೆರವು ಮತ್ತು ಸಾಲ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಉದ್ಯಮವನ್ನು ಫಲಪ್ರದಗೊಳಿಸಬೇಕೆಂದು ಹೇಳಿದರು. ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯತು ಸದಸ್ಯರಾದ ಎಸ್.ಬಿ.ನರಸಿಂಹ ಪೂಜಾರಿ,ವರಮ್ಲ ,ಕೇರಳ ರಾಜ್ಯ ಕಿರು ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ರಾಜರಾಮ ಪೆರ್ಲ ಸಭೆಯಲ್ಲಿ ಉಪಸ್ಥಿತರಿದ್ದರು. ಮಂಜೇಶ್ವರ ಬ್ಲಾಕ್ ಕೈಗಾರಿಕಾ ವಿಸ್ತರಣಾಧಿಕಾರಿ ಅರ್ಜುನ್ ,ಫಿನಾಂಶೀಯಲ್ ಲಿಟರಸಿ ಕೋರ್ಡಿನೇಟರ್ ಕೃಷ್ಣ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ತರಬೇತಿ ನೀಡಿದರು. ಯೋಜನಾ ಸಮಿತಿಯ ಉಪಾಧ್ಯಕ್ಷೆ ಆಯಿಷಾ ಎ.ಎ,ಸ್ವಾಗತಿಸಿ ಅನ್ವಿತಾ ಎ.ಕೆ.ವಂದಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಉದ್ಯಮಿಗಳು ಭಾಗವಹಿಸಿದ್ದರು.


Share with

Leave a Reply

Your email address will not be published. Required fields are marked *