ಪೆರ್ಲ: ಮನೆ ಸಮೀಪದ ಅವರಣವಿಲ್ಲದ ಬಾವಿಗೆ ಕಾಲು ಜಾರಿ ಬಿದ್ದು ಪಾಕತಜ್ಞರೋರ್ವರು ಮೃತಪಟ್ಟ ಘಟನೆ ಕಾಟುಕುಕ್ಕೆ ಸಮೀಪದ ಕುಡ್ತಡ್ಕದಲ್ಲಿ ಗುರುವಾರ(ಜು.28) ಸಂಜೆ ನಡೆದಿದೆ.
ಪಾಕತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ದಿ.ಚಂದ್ರಶೇಖರ ನಾಯಕ್ ಅವರ ಪುತ್ರ ಜನಾರ್ಧನ ನಾಯಕ್ (42 ವ) ಮೃತಪಟ್ಟವರೆಂದು ಗುರುತಿಸಲಾಗಿದೆ. ಸಮಾರಂಭಗಳ ಅಡುಗೆ ಕಾರ್ಯಕ್ಕೆ ತೆರಳುತ್ತಿದ್ದ ಇವರು ಮಳೆಗಾಳವಾದ್ದರಿಂದ ತೋಟದ ಕೆಲಸ ನಿರ್ವಹಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೀರು ಸೇದಲು ಬಾವಿಯ ಬಳಿ ಹೋಗಿದ್ದು, ಈ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಸಂಜೆಯ ವೇಳೆಗೆ ತವರಿಗೆ ಹೋಗಿದ್ದ ಪತ್ನಿ ಹಾಗೂ ಮಗು ಮರಳಿ ಮನೆಗೆ ಬಂದ ವೇಳೆ ಜನಾರ್ದನ ನಾಯಕ್‌ರವರು ಕಾಣದೆ ಇದ್ದಾಗ ಹುಡುಕಾಟ ನಡೆಸಿದ್ದಾರೆ. ಬಳಿಕ ಬಾವಿಯಲ್ಲಿ ಜನಾರ್ದನ್‌ರವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಸೇರಿಕೊಂಡ ಮುಳುಗುತಜ್ಞರ ಸಹಾಯದಿಂದ ಮೃತದೇಹವನ್ನು ಮೇಲೆತರಲಾಯಿತು.
ಮೃತರು ಪತ್ನಿ, ಮಗು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.