ರಸ್ತೆ ಬದಿ ಕಸ ಹಾಕಿದ ಕಿಡಿಗೇಡಿಗೆ ಪರಿಸರವಾಸಿಗಳಿಂದ ಶ್ರದ್ಧಾಂಜಲಿ ಅರ್ಪಣೆ!

Share with

ರಸ್ತೆ ಬದಿ ಕಸ ಬಿಸಾಕಿದ ಕಿಡೊಗೇಡಿ

ಪುತ್ತೂರು: ಇಲ್ಲಿನ ಬೆದ್ರಾಲ ಹೌಸ್ ರಸ್ತೆಯಲ್ಲಿ ಕಿಡಿಗೇಡಿಗಳು ಖಾಲಿ ಬೀಯರ್ ಬಾಟಲಿ ಮತ್ತು ಕಸ ತುಂಬಿದ ಬಿಳಿ ಬಣ್ಣದ ಗೋಣಿ ಚೀಲವನ್ನು ರಸ್ತೆ ಬದಿ ಬಿಸಾಕಿ ಹೋಗಿದ್ದಾರೆ.

ಪರಿಸರವಾಸಿಗಳು ಬಿಸಾಕಿ ಹೋಗಿದ್ದ ಕಸದ ಬಳಿ ಈ ಕೃತ್ಯ ಎಸಗಿದವರಿಗೆ ಶ್ರದ್ದಾಂಜಲಿ ಅರ್ಪಿಸಿ ಅವರಿಗೆ ಸದ್ಗತಿ ಕೋರುವ ಮತ್ತು ಅವರ ಕುಟುಂಬಕ್ಕೆ ಸದ್ಬುದ್ದಿಯನ್ನು ನೀಡಲಿ ಎಂದು ಪರಮಾತ್ಮನಲ್ಲಿ ಕೋರುವ ಬರಹವನ್ನು ಅಳವಡಿಸಿದ್ದಾರೆ. ಇದು ಒಂದೆಡೆ ಹಾಸ್ಯಾಸ್ಪದವಾಗಿ ಕಂಡರೂ ಕೂಡಾ ಮತ್ತೊಂದೆಡೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ಸಂದೇಶವನ್ನು ಸಾರುವಂತಾಗಿದೆ.

ನಗರಸಭೆಯಿಂದ ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದೆಂದು ಮುನ್ನೆಚ್ಚರಿಕೆ ನೀಡಿತ್ತಿದ್ದರೂ ಕೂಡ ಜನರು ರಸ್ತೆ ಬದಿ ಕಸವನ್ನು ಎಸೆದು ಪರಿಸರ ನಾಶ ಮಾಡುತ್ತಿರುವುದು ವಿಷಾದನೀಯ.


Share with

Leave a Reply

Your email address will not be published. Required fields are marked *