ಕಾಸರಗೋಡು: ಚಂಬ್ರಕಾನ ನಿವಾಸಿ ದಿ.ನಾರಾಯಣ ಎಂಬವರ ಪತ್ನಿ ಸರೋಜಿನಿ (64) ಅಲ್ಪ ಕಾಲದ ಅಸೌಖ್ಯದಿಂದ ಸೆ.2ರಂದು ರಾತ್ರಿ 9 ಗಂಟೆಗೆ ನಿಧನರಾದರು. ಅಕ್ಕು ಹಾಗೂ ದಿ /ಚನಿಯ ಕುಂಡಕೋಳಿ ಇವರ ದ್ವಿತೀಯ ಪುತ್ರಿಯಾದ ಸರೋಜಿನಿ ಗದ್ದೆ ಕೃಷಿ ಕಾಯಕ ನಿರ್ವಹಿಸುತ್ತಿದ್ದು ಉತ್ತಮ ಓಬೇಲೆ ಜನಪದ ಪಾರ್ದನಗಳನ್ನು ಹಾಡುತ್ತಿದ್ದರು.
ಈ ಹಿಂದೆ ನಡೆದ ಎಣ್ಮಕಜೆ ಗ್ತಾಮ ಪಂಚಾಯತು ಸಾಕ್ಷರರ ಕಲೋತ್ಸವಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಮೃತರು ಮಕ್ಕಳಾದ ರವಿಶಂಕರ್, ಭವಾನಿ ಶಂಕರ, ಹರೀಶ, ಪೈವಳಿಕೆ ನಗರ ಶಾಲಾ ಅಧ್ಯಾಪಕ ಸಂಜೀವ ಸಿ.ಎಚ್.,
ಸವಿತಾ,ಸಹೋದರ ಸಹೋದರಿಯರಾದ ಕಮಲ, ಗುಲಾಬಿ, ಲೀಲಾವತಿ ಕೊರಗಪ್ಪ, ಆನಂದ, ಯಾದವ ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ.