
ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಅದೃಷ್ಟ ಈಗ ಖುಲಾಯಿಸಿದೆ. ಸೂಪರ್ ಹಿಟ್ ಚಿತ್ರ ‘ಲಗಾನ್’ ಅನ್ನು ನಿರ್ದೇಶನ ಮಾಡಿದ್ದ ಅಶುತೋಶ್ ಗೋವರಿಕರ್ ಅವರ ಮುಂದಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಿನಿಮಾದ ಕುರಿತಾಗಿ ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆಯೂ ಮುಗಿದಿದ್ದು, ಕಾಂತಾರ 2 ಸಿನಿಮಾದ ನಂತರ ಈ ಸಿನಿಮಾ ಆರಂಭವಾಗಲಿದೆ ಎಂದು ವರದಿಯಾಗಿದೆ.