
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸುಂಕ ಸಮರದ ಪರಿಣಾಮವಾಗಿ ಜಗತ್ತಿನ ಷೇರು ಮಾರುಕಟ್ಟೆಗಳೆಲ್ಲ ಏರಿಳಿತ ವಾಗಿದ್ದು, ಇದರಿಂದಾಗಿ ಚಿನ್ನದ ಬೆಲೆ ಸತತವಾಗಿ ಕುಸಿಯುತ್ತಿ
ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 3,450 ರೂಪಾಯಿ ಕಡಿಮೆಯಾಗಿದೆ. ಈ ಬೆನ್ನಲ್ಲೇ ದಾಸ್ತಾನುದಾರರು ಮತ್ತು ಚಿಲ್ಲರೆ ಮಾರಾಟಗಾರರು ಖರೀದಿಗೆ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಚಿನ್ನದ ದರ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ 1,050 ರೂ.ನಷ್ಟು ಇಳಿಕೆಯಾಗಿದೆ.ಮಂಗಳವಾರ 10 ಗ್ರಾಂಗೆ 91,250 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರ 90,200 ರೂ.ಗೆ ತಲುಪಿತು.