ದಾಖಲೆ ಬಿಡುಗಡೆ ಮಾಡಿದರೆ ಹೆದರಲ್ಲವೆಂದು ಡಿ. ಕೆ.ಶಿವಕುಮಾರ್ ಹೇಳಿದ್ದ ಕುರಿತು ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಡಿಕೆಶಿ ಯಾರಿಗೂ ಹೆದರಲ್ಲ, ಬದಲಾಗಿ ಖರೀದಿಸುತ್ತಾರೆ. ಬಿಜೆಪಿ ರಾಷ್ಟ್ರೀಯ ನಾಯಕರನ್ನೂ ಖರೀದಿಸಬಹುದು. ಏಕೆಂದರೆ ಅವರು ದೇಶದಲ್ಲೇ ನಂ.1 ಶ್ರೀಮಂತ. ಆದರೆ ಹೆಚ್.ಡಿ.ದೇವೇಗೌಡರ ಕುಟುಂಬವನ್ನು ಖರೀದಿಸಲಾಗಲ್ಲವೆಂದು ಟಾಂಗ್ ನೀಡಿದ್ದಾರೆ. ಹೆಚ್ಡಿಕೆ ದಾಖಲೆ ಬಿಡುಗಡೆ ಮಾಡುವುದಾಗಿ ಈ ಹಿಂದೆ ಪೆನ್ಡ್ರೈವ್ ತೋರಿಸಿದ್ದರು.