ಕಣ್ಣಿನ ಬ್ಲ್ಯಾಕ್ ಸರ್ಕಲ್ ಗೆ ಇಲ್ಲಿದೆ ಪರಿಹಾರ

Share with

ವೀಕ್ಷಕವಾಣಿ: ಕಣ್ಣುಗಳ ಕೆಳಗೆ ಕಪ್ಪಾಗಿದ್ದರೆ, (ಡಾರ್ಕ್ ಸರ್ಕಲ್) ತುಂಬಾನೆ ಕಿರಿಕಿರಿ ಅನಿಸುತ್ತೆ.

ನಿಮ್ಮ ಕಣ್ಣಿನ ಕೆಳಗೆ ಕಪ್ಪಾಗಿದ್ದರೆ ಅದಕ್ಕೆ ಕಾರಣ ಆನುವಂಶಿಕತೆ, ನಿದ್ರೆಯ ಕೊರತೆ, ಒತ್ತಡ ಮತ್ತು ನಿರ್ಜಲೀಕರಣ ಸೇರಿದಂತೆ ವಿವಿಧ ಅಂಶಗಳಿಂದ ಈ ರೀತಿ ಉಂಟಾಗುತ್ತದೆ. ಇದಕ್ಕೆ ಪರಿಹಾರವೆಂಬಂತೆ ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಕಪ್ಪು ವಲಯಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಆಗದಿದ್ದರೂ ಸ್ವಲ್ಪ ಪ್ರಮಾಣದಲ್ಲಿಯಾದರೂ ಆ ಕಪ್ಪು ಕಲೆಗಳನ್ನು ಕಡಿಮೆ ಮಾಡುವುದರೊಂದಿಗೆ ನಿಮ್ಮ ಕಣ್ಣುಗಳು ಅಂದವಾಗಿ ಕಾಣುವಂತೆ ಮಾಡುತ್ತದೆ. ಡಾರ್ಕ್ ಸರ್ಕಲ್ ತಡೆಯಲು ಸಹಾಯ ಮಾಡುವ ಕೆಲವು ಪರಿಹಾರಗಳು ಇಲ್ಲಿವೆ:

ಸೌತೆಕಾಯಿ ಚೂರುಗಳು: ನಿಮ್ಮ ಕಣ್ಣುಗಳ ಮೇಲೆ ಕಪ್ಪಾಗಿರುವ ವಲಯಗಳ ಮೇಲೆ ತಣ್ಣಗಿನ ಸೌತೆಕಾಯಿ ತುಂಡುಗಳನ್ನು ಇರಿಸಿ. ಸುಮಾರು 10-15 ನಿಮಿಷಗಳ ಕಾಲ ಹಾಗೇ ಬಿಡಿ. ಸೌತೆಕಾಯಿಗಳು ನಿಮ್ಮ ಕಣ್ಣುಗಳನ್ನು ತಂಪಾಗಿಸುತ್ತವೆ ಮತ್ತು ಕಣ್ಣು ಉಬ್ಬಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಚರ್ಮವನ್ನು ಹಗುರಗೊಳಿಸುತ್ತದೆ.

ಆಲೂಗೆಡ್ಡೆ ಚೂರುಗಳು ಅಥವಾ ಅದರ ರಸ: ಸೌತೆಕಾಯಿಯಂತೆಯೇ, ನೀವು ತಂಪಾದ ಆಲೂಗಡ್ಡೆ ತುಂಡುಗಳನ್ನು ನಿಮ್ಮ ಕಣ್ಣುಗಳ ಮೇಲೆ ಇರಿಸಬಹುದು ಅಥವಾ ಆಲೂಗಡ್ಡೆ ರಸವನ್ನು ಮಾಡಿಕೊಂಡು ಕಪ್ಪು ವೃತ್ತಗಳಿರುವಲ್ಲಿ ಸರಿಯಾಗಿ ಹಚ್ಚಬಹುದು. ಆದರೆ ಹಚ್ಚಿ ತೊಳೆಯುವ ಮೊದಲು 10-15 ನಿಮಿಷಗಳ ಕಾಲ ಹಾಗೇ ಬಿಡಿ.

ಟೊಮೆಟೊ ರಸ: ಒಂದು ಟೀ ಸ್ಪೂನ್ ಟೊಮೆಟೊ ರಸವನ್ನು ಕೆಲವು ಹನಿ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಪ್ಪು ವರ್ತುಲಗಳ ಸುತ್ತಲೂ ಹಚ್ಚಿಕೊಳ್ಳಿ ಮತ್ತು ತೊಳೆಯುವ ಮೊದಲು 10 ನಿಮಿಷಗಳ ಕಾಲ ಹಾಗೇ ಬಿಡಿ. ಟೊಮೆಟೊಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ ಮತ್ತು ಚರ್ಮವನ್ನು ಹಗುರಗೊಳಿಸಿ, ಚರ್ಮ ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ.

ಗ್ರೀನ್ ಟೀ ಬ್ಯಾಗ್​​ಗಳು: ಎರಡು ಗ್ರೀನ್ ಟೀ ಬ್ಯಾಗ್​​​ಗಳನ್ನು ಕೆಲವು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಮುಳುಗಿಸಿ, ನಂತರ ಅವು ತಣ್ಣಗಾಗುವವರೆಗೆ ಫ್ರಿಡ್ಜ್​​​​ನಲ್ಲಿಡಿ. ತಣ್ಣಗಾದ ಚಹಾದ ಬ್ಯಾಗ್​​ಗಳನ್ನು ಕಣ್ಣು ಮುಚ್ಚಿ, ಬಳಿಕ ಕಪ್ಪು ವರ್ತುಲಗಳ ಮೇಲೆ ಸುಮಾರು 15 ನಿಮಿಷಗಳ ಕಾಲ ಇರಿಸಿಕೊಳ್ಳಿ.

ಹಾಲು ಮತ್ತು ಅರಿಶಿನ ಪೇಸ್ಟ್: ಒಂದು ಚಿಟಿಕೆ ಅರಿಶಿನವನ್ನು ಕೆಲವು ಹನಿ ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಕಪ್ಪು ವರ್ತುಲಗಳಿಗೆ ಹಚ್ಚಿ ಮತ್ತು ತೊಳೆಯುವ ಮೊದಲು 10-15 ನಿಮಿಷಗಳ ಕಾಲ ಬಿಡಿ.

ಬಾದಾಮಿ ಎಣ್ಣೆ: ಮಲಗುವ ಮೊದಲು ನಿಮ್ಮ ಕಣ್ಣುಗಳ ಸುತ್ತಲೂ ಕೆಲವು ಹನಿ ಬಾದಾಮಿ ಎಣ್ಣೆಯನ್ನು ನಿಧಾನವಾಗಿ ಹಚ್ಚಿಕೊಳ್ಳುತ್ತಾ ಮಸಾಜ್ ಮಾಡಿ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಮತ್ತು ಕೆ ಇದ್ದು, ಇದು ಕಾಲಾನಂತರದಲ್ಲಿ ಕಪ್ಪು ವರ್ತುಲಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ.

ರೋಸ್ ವಾಟರ್: ಹತ್ತಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ನೆನೆಸಿಡಿ. ಎರಡು ನಿಮಿಷದ ಬಳಿಕ ನೀವು ಕಣ್ಣು ಮುಚ್ಚಿಕೊಂಡು ಅವುಗಳನ್ನು ಕಪ್ಪಾಗಿರುವ ಜಾಗದ ಮೇಲೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. 10-15 ನಿಮಿಷಗಳ ಕಾಲ ಇರಿಸಿಕೊಂಡು ಬಳಿಕ ಮುಖ ತೊಳೆಯಿರಿ. ರೋಸ್ ವಾಟರ್ ಹಿತವಾದ ಗುಣಗಳನ್ನು ಹೊಂದಿರುವುದರಿಂದ ಕಣ್ಣು ಉಬ್ಬಿಕೊಳ್ಳುವುದನ್ನು ಕಡಿಮೆ ಮಾಡುವುದರ ಜೊತೆಗೆ ಚರ್ಮದಲ್ಲಿ ತಾಜಾತನ ಮೂಡಿಸಲು ಸಹಾಯ ಮಾಡುತ್ತದೆ.

ಕೋಲ್ಡ್ ಮಿಲ್ಕ್ ಕಂಪ್ರೆಸ್: ಹತ್ತಿ ಪ್ಯಾಡ್​​ಗಳನ್ನು ತಣ್ಣನೆಯ ಹಾಲಿನಲ್ಲಿ ನೆನೆಸಿ ಮತ್ತು ಅವುಗಳನ್ನು ಕಣ್ಣು ಮುಚ್ಚಿಕೊಂಡು ಅದರ ಮೇಲೆ 10-15 ನಿಮಿಷಗಳ ಕಾಲ ಇರಿಸಿಕೊಂಡು ಮಸಾಜ್ ಮಾಡಿಕೊಳ್ಳಿ. ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಇದು ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡಲು ಮತ್ತು ಹೊಳಪು ನೀಡಲು ಸಹಾಯ ಮಾಡುತ್ತದೆ.


Share with

Leave a Reply

Your email address will not be published. Required fields are marked *