
ಸಕಲೇಶಪುರದ ಮಾರಣ ಹಳ್ಳಿಯ ಬಳಿ ಶಿರಾಡಿ ಘಾಟಿಯಲ್ಲಿ ನಿನ್ನೆ ರಾತ್ರಿ ಭೂಕುಸಿತ ಸಂಭವಿಸಿದೆ. ವಿದ್ಯುತ್ ಕಂಬದ ಬುಡದಿಂದ ಮಣ್ಣು ಕುಸಿದಿದ್ದು, ಗುಡ್ಡದ ಮಣ್ಣು ರಸ್ತೆಯ ಮೇಲೆ ಹರಡಿದೆ. ವಾಹನಗಳಿಗೆ ಮಾರ್ಗ ಬದಲಾಯಿಸಲು ಈಗಾಗಲೇ ಸೂಚನೆ ನೀಡಲಾಗಿದೆ.
ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ವಾಹನಗಳನ್ನು ಹಾಸನದಿಂದ ಬೇಲೂರು ಮಾರ್ಗವಾಗಿ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಆದೇಶ ಮಾಡಿದ್ದಾರೆ.
ಶಿರಾಡಿ ಘಾಟ್‌ನಲ್ಲಿರುವ ಆನೆ ಮಹಲ್ ಬಳಿಯೂ ಭೂಕುಸಿತ ಸಂಭವಿಸಿದ್ದು, ಮಳೆಗಾಲದಲ್ಲಿ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಆತಂಕ ಉಂಟು ಮಾಡಿದೆ.