ಪಾಟ್ನಾ: ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿಕೊಟ್ಟ ಘಟನೆ ಬಿಹಾರದ ನಾವಡ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ಕೆಲ ಸಮಯದ ಹಿಂದೆ ಮಹಿಳೆ ಮದುವೆಯಾಗಿದ್ದಳು. ಆದರೆ ವಿವಾಹದ ಮೊದಲೆ ಆಕೆ ಇನ್ನೋರ್ವನ ಒತೆ ಪ್ರೀತಿಯಲ್ಲಿದ್ದು, ಮನಸ್ಸಿನಲ್ಲಿ ಪ್ರಿಯಕರನ ಯೋಚನೆ ಆಕೆಯನ್ನು ಕಾಡುತ್ತಿತ್ತು. ಅದೇ ಕಾರಣಕ್ಕೆ ಮನೆಯಲ್ಲಿ ಗಂಡನಿಲ್ಲದ ವೇಳೆ ಕದ್ದು ಮುಚ್ಚಿ ರಾತ್ರಿ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು. ಪ್ರಿಯಕರನೂ ಕದ್ದುಮುಚ್ಚಿ ಗ್ರಾಮಕ್ಕೆ ಬಂದು ಭೇಟಿಯಾಗುತ್ತಿದ್ದ.
ಒಂದು ದಿನ ರೆಡ್‌ಹ್ಯಾಂಡ್ ಆಗಿ ಈರ್ವರು ಊರಿನವರಿಗೆ ಕಣ್ಣಿಗೆ ಬಿದ್ದಿದ್ದು, ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಆದರೆ ಪತಿಗೆ ಆಕೆಯ ಪ್ರೀತಿಯ ವಿಚಾರ ತಿಳಿದು ಮರುದಿನ ಯುವಕನ ಜೊತೆಗೆ ತನ್ನ ಪತ್ನಿಯನ್ನು ಊರಿನ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾನೆ. ಯುವಕ ಆಕೆಗೆ ಸಿಂಧೂರ ಇಡುವ ವೇಳೆ ಪತಿಯನ್ನು ನೋಡಿ ಅತ್ತಿರುವ ವೀಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಪೊಲೀಸರು ಮಾಹತಿ ಪಡೆದಿದ್ದು, ಯಾವುದೇ ಪ್ರಕರಣ ದಾಖಲು ಮಾಡಿಲ್ಲ ಎಂದು ತಿಳಿದು ಬಂದಿದೆ.