ಜರ್ನಲಿಸ್ಟ್ ಯೂನಿಯನ್ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

Share with

ಅಧ್ಯಕ್ಷರಾಗಿ ರಾಮದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮೊಟ್ಟೆತ್ತಡ್ಕ ಆಯ್ಕೆ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವಿ.ಟಿವಿ ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ವರದಿಗಾರ ಸಂತೋಷ್ ಮೊಟ್ಟೆತ್ತಡ್ಕ ಆಯ್ಕೆಯಾಗಿದ್ದಾರೆ.

ಜರ್ನಲಿಸ್ಟ್ ಯೂನಿಯನ್ ಘಟಕದ ಸ್ಥಾಪಕಾಧ್ಯಕ್ಷರಾದ ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಅವರ ನೇತೃತ್ವದಲ್ಲಿ ಜು.9ರಂದು ನಡೆದ ಯೂನಿಯನ್ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರುಗಳಾಗಿ ಸುದ್ದಿ ನ್ಯೂಸ್ ಚಾನೆಲ್ ನಿರೂಪಕಿ ಹೇಮಾ ಜಯರಾಂ ರೈ, ನ್ಯೂಸ್ ಕನ್ನಡ ವೆಬ್ ಸೈಟ್ ಉಪ ಸಂಪಾದಕಿ ಚೈತ್ರ ಬಂಗೇರ, ಕಹಳೆ ನ್ಯೂಸ್ ನಿರೂಪಕಿ ಸುಮಿತ್ರ, ಕಾರ್ಯದರ್ಶಿಯಾಗಿ ಕಹಳೆ ನ್ಯೂಸ್ ನಿರೂಪಕಿ ಕವಿತಾ ಮಾಣಿ, ಜತೆ ಕಾರ್ಯದರ್ಶಿಯಾಗಿ ನಿಖರ ನ್ಯೂಸ್ ವೆಬ್ ಸೈಟ್ ಮುಖ್ಯಸ್ಥ ಚಿನ್ಮಯಕೃಷ್ಣ ಮತ್ತು ಕೋಶಾಧಿಕಾರಿಯಾಗಿ ಕಹಳೆ ನ್ಯೂಸ್ ವರದಿಗಾರ ಪ್ರಜ್ವಲ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸುದ್ದಿ ಬಿಡುಗಡೆಯ ಜ್ಯೋತಿಪ್ರಕಾಶ್ ಪುಣಚ, ಶಶಿಧರ ವಿ.ಎನ್. ನರಿಮೊಗರು, ನಮಿತಾ ದಿಲೀಪ್, ಚಂದ್ರಕಾಂತ್ ಉರ್ಲಾಂಡಿ, ಆದಿತ್ಯ ಈಶ್ವರಮಂಗಲ, ದಿವ್ಯಶ್ರೀ ವಜ್ರದುಂಬಿ, ವಸಂತ ಸಾಮೆತ್ತಡ್ಕ, ಹರಿಪ್ರಸಾದ್ ನೆಲ್ಯಾಡಿ, ವಿಟಿವಿಯ ಅಶ್ವಿನಿ ಪೆರುವಾಯಿ, ಪ್ರಭಾಕರ್, ದಿನೇಶ್, ಕಹಳೆ ನ್ಯೂಸ್ ನ ಭರತ್ ಬಲ್ನಾಡು, ಮಧುಶ್ರೀ, ನಿತೇಶ್, ಹೊಸಕನ್ನಡದ ದೀಪಕ್,ವೀಕ್ಷಕವಾಣಿಯ ಪುರುಷೋತ್ತಮ ಸುರುಳಿ, ರಕ್ಷಿತ್ ಆರ್.ಜೆ., ನಮ್ಮ ಕುಡ್ಲದ ಶಶಿಧರ ನೆಕ್ಕಿಲಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಪತ್ರಿಕೆ, ದೃಶ್ಯ ಮತ್ತು ವೆಬ್ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇತರ ವರದಿಗಾರರನ್ನು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘಕ್ಕೆ ಸೇರ್ಪಡೆ ಮಾಡಲು ತೀರ್ಮಾನಿಸಲಾಯಿತು.

ವಿ.ಬಿ.ಅರ್ತಿಕಜೆ, ಮಹೇಶ್ ಕಜೆ, ರಾಕೇಶ್ ಕಮ್ಮಜೆ ಪುನರಾಯ್ಕೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಗೌರವ ಸಲಹೆಗಾರರಾಗಿ ಹಿರಿಯ ಪತ್ರಕರ್ತರಾದ ವಿಶ್ರಾಂತ ಪ್ರಾಧ್ಯಾಪಕರೂ ಸುದ್ದಿ ಬಿಡುಗಡೆಯ ಅಂಕಣಕಾರರೂ ಆಗಿರುವ ಪ್ರೊ. ವಿ.ಬಿ.ಅರ್ತಿಕಜೆ, ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಮತ್ತು ಕಾನೂನು ಸಲಹೆಗಾರರಾಗಿ ಖ್ಯಾತ ವಕೀಲ ಮಹೇಶ್ ಕಜೆ ಅವರನ್ನು ಪುನರಾಯ್ಕೆ ಮಾಡಲು ನಿರ್ಧರಿಸಲಾಯಿತು. ಪತ್ರಿಕಾ ದಿನಾಚರಣೆ ಆಚರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತಲ್ಲದೆ ಪತ್ರಕರ್ತರಾಗಿ ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ತಾಲೂಕಿನ ಹಿರಿಯ ಪತ್ರಕರ್ತರುಗಳನ್ನು ಪತ್ರಿಕಾ ದಿನಾಚರಣೆಯಂದು ಸನ್ಮಾನಿಸಲು ನಿರ್ಧರಿಸಲಾಯಿತು.


Share with

Leave a Reply

Your email address will not be published. Required fields are marked *