ಮಕ್ಕಳಲ್ಲಿ ಮದ್ರಾಸ್ ಕಣ್ಣಿನ ಸೋಂಕು ಹೆಚ್ಚಳ!

Share with

 ರಾಜ್ಯದಲ್ಲಿ ಹವಾಮಾನ ಹಿತವಾಗಿದೆ. ಇದರ ಮಧ್ಯೆ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡಲಾರಂಭಿಸಿವೆ. ಅದ್ರಲ್ಲೂ ನಗರದ ಜನರಲ್ಲಿ ಮದ್ರಾಸ್ ಕಣ್ಣಿನ ಸಮಸ್ಯೆ ಹೆಚ್ಚಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ.  ಮದ್ರಾಸ್ ಐ ಸದ್ದಿಲ್ಲದೇ ಎಂಟ್ರಿ ಕೊಟ್ಟಿದೆ. ಆಗಾಗ ಮಳೆ,  ಬಿಸಿಲಿನ  ವಾತಾವರಣ ಇರೋದ್ರಿಂದ ಈ ಸೋಂಕು ಕಾಣಿಸಿಕೊಂಡಿದೆ. ಈ ರೀತಿಯ ವಾತಾವರಣದಲ್ಲಿ ಮದ್ರಾಸ್ ಐ ಉಂಟುಮಾಡುವ ವೈರಸ್ ಸೂಪರ್ ಸ್ಪ್ರೆಡ್ ಆಗುತ್ತೆ ಅಂತಾರೆ ವೈದ್ಯರು. ಈಗಾಗಲೆ ಆಸ್ಪತ್ರೆಗೆ ದಿನಕ್ಕೆ 35ರಿಂದ 40 ಪ್ರಕರಣಗಳು ಬರ್ತಿವೆ. ಮದ್ರಾಸ್ ಐ ಸೋಂಕಿತ ಮಕ್ಕಳೊಂದಿಗೆ ಇತರೆ ಮಕ್ಕಳು ಬೆರೆಯುವುದು, ಒಂದೇ ವಾಹನದಲ್ಲಿ ಓಡಾಟ ಇದರಿಂದ ವೇಗವಾಗಿ ಹರಡುತ್ತಿದೆ. 

ಮದ್ರಾಸ್‌ ಐ ವೈರಾಣು ಸೋಂಕಾಗಿದ್ದು, ಒಬ್ಬರಿಂದ ಒಬ್ಬರಿಗೆ ವ್ಯಕ್ತಿಯ ಕೈಗಳಿಂದ, ಅವರು ಬಳಸಿರುವ ಬಟ್ಟೆ, ವಸ್ತುಗಳು ಸಂಪರ್ಕಕ್ಕೆ ಬಂದಾಗ ಈ ರೋಗಾಣು ಹರಡುತ್ತದೆ. ಸೋಂಕು ತಗುಲಿದಾಗ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಪಿಚ್ಚುಗಟ್ಟುವುದು, ಕಣ್ಣಿನಲ್ಲಿ ಏನಾದರೂ ಬಿದ್ದಿರುವ ಅನುಭವ ಆಗುವುದು ಇದರ ಲಕ್ಷಣವಾಗಿದೆ. 

ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳಿಗೆ ರಜೆ ನೀಡಿ ಇತರೆ ಮಕ್ಕಳೊಂದಿಗೆ ಬೇರೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕಣ್ಣಿನ ಸೋಂಕು ಇರುವ ವಿದ್ಯಾರ್ಥಿಗಳು ಅಥವಾ ಅವರ ಪಾಲಕರಿಗೆ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಲು ಸೂಚಿಸಬೇಕು. ಯಾವುದೇ ಕಾರಣಕ್ಕೂ ವೈದ್ಯರ ಚೀಟಿಯನ್ನು ಪಡೆಯದೇ ಔಷಧಿ ಅಂಗಡಿಗಳಿಂದ ನೇರವಾಗಿ ಕಣ್ಣಿನ ಔಷಧಿಗಳನ್ನು ಪಡೆದು ಬಳಸಬಾರದು. 

ಎಲ್ಲಾ ವಿದ್ಯಾರ್ಥಿಗಳಿಗೆ ಆಗಾಗ್ಗೆ ಸೋಪ್‌ನಿಂದ ಕೈತೊಳೆಯಲು ಅಥವಾ ಸ್ಯಾನಿಟೈಜರ್‌ ಬಳಸಲು ತಿಳಿಸಬೇಕು. ಸೋಂಕಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಇತರರಿಂದ ದೂರವಿದ್ದು, ಕನ್ನಡಕಗಳನ್ನು ಧರಿಸಿ, ಕಣ್ಣುಗಳ ರಕ್ಷಣೆ ಮಾಡಿಕೊಳ್ಳುವ ಮೂಲಕ ಸೋಂಕು ಹರಡದಂತೆ ತಡೆಗಟ್ಟಬಹುದಾಗಿದೆ.


Share with

Leave a Reply

Your email address will not be published. Required fields are marked *