ಮಂಜೇಶ್ವರ: ಉದ್ಯಾವರ ತೋಟದಲ್ಲಿ ದೇಶದ 75ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಧ್ವಜಾರೋಹಣ ಪ್ರಯುಕ್ತ ಸೇರಿದ ಅಸೆಂಬ್ಲಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಕಾರ್ಯಕ್ರಮದ ಪ್ರಾಸ್ತಾವನೆ ಮಾಡಿ ಸೇರಿರುವ ಅತಿಥಿ ಹಾಗೂ ವಿದ್ಯಾಭಿಮಾನಿಗಳನ್ನು ಸ್ವಾಗತಿಸಿದರು. ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಉದ್ಘಾಟನೆ ನಡೆಸಿಕೊಟ್ಟ ಸೈಫುಲ್ಲ ತಂಗಳ್ ಅವರು ಮಕ್ಕಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ಯನ್ನು ಪಿ.ಟಿ.ಎ ಅಧ್ಯಕ್ಷ ರಾದ ಅಬ್ದುಲ್ಲ ವಹಿಸಿಕೊಂಡಿದ್ದರು. ಶಾಲಾಭಿವೃದ್ಧಿ ಕಮಿಟಿ ಪದಾಧಿಕಾರಿಗಳಾದ ಉಮರ್ ಆಲಿ, ಆಸಿಫ್ ಉದ್ಯಾವರ, ಮಕ್ಕಳ ರಕ್ಷಕರು, ಶಾಲಾ ಸಿಬ್ಬಂದಿ ವರ್ಗ, ಅಂಗನವಾಡಿ ಪುಟಾಣಿಗಳು ಹಾಗೂ ಅದರ ಕಾರ್ಯಕರ್ತರು ಈ ಉತ್ಸವದಲ್ಲಿ ಸಕ್ರಿಯವಾಗಿ ಹಾಜರಿದ್ದು ಕಾರ್ಯಕ್ರಮ ಚಂದಗಾಣಿಸಿ ಕೊಟ್ಟರು.