
ಕುಂಬಳೆ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ D I G R. ಪೊನ್ನಿ ಐ ಪಿ ಎಸ್ ಅವರು ಇಂದು ಬೆಳಿಗ್ಗೆ ಇತಿಹಾಸ ಪ್ರಸಿದ್ಧ ಕುಂಬಳೆ ಕಾಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ದಯಾರಾಜ, ಮ್ಯಾನೆಜರ್ ರಾಜಶೇಖರ್ ಏ ಸಿ, ಬ್ರಹ್ಮಕಲಶ ಸಮಿತಿಯ ಸದಸ್ಯರಾದ ಕೆ. ಲಕ್ಷ್ಮಣ ಪ್ರಭು ಹಾಗೂ ಸಂಜೀವ ಎಂ ಉಪಸ್ಥಿತರಿದ್ದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವತಿಯಿಂದ ಕರಾವಳಿ ಭದ್ರತೆ ಹಾಗೂ ಮಾದಕ ವಸ್ತುಗಳ ವಿರುದ್ಧವಾಗಿ ಜಾಗೃತಿ ಮೂಡಿಸಲು ಇದೇ ತಿಂಗಳ ಮಾರ್ಚ್ 7 ರಿಂದ ಗುಜರಾತ್ ನಿಂದ ಪ್ರಾರಂಭಗೊಂಡು ತಿರುವನಂತಪುರ ದವರೆಗೆ ತೆರಳಲಿರುವ ಸೈಕಲ್ ರ್ಯಾಲಿ ಯು ಇದೇ ತಿಂಗಳು 27 ರಂದು ಬೆಳಗ್ಗೆ 10.30 ಕ್ಕೆ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತಲುಪಲಿದೆ. ಈ ಸಂದರ್ಭದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶ ಸಮಿತಿಯ ವತಿಯಿಂದ ಅವರಿಗೆ ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು, ಮಕ್ಕಳು ಹಾಗೂ ದೇಶ ಪ್ರೇಮಿಗಳು ಆಗಮಿಸಬೇಕಾಗಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ.