Yoga Day 2025: “ಆಂತರಿಕ ಶಾಂತಿ ಜಾಗತಿಕ ನೀತಿಯಾಗಲಿ”- ಪ್ರಧಾನಿ ನರೇಂದ್ರ ಮೋದಿ

Share with

“ಯೋಗ ಅಂತಾರಾಷ್ಟ್ರೀಯ ಗಡಿಗಳನ್ನು ಮೀರಿ ಹೋಗಿದ್ದು, ವಿಶ್ವ ಮಾನವೀಯತೆಯನ್ನು ಒಗ್ಗೂಡಿಸುವ ಶಕ್ತಿಯಾಗಿ ಹೊರಹೊಮ್ಮಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2025ನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಎಲ್ಲರಿಗಾಗಿ ಎಂಬ ಸಂದೇಶವನ್ನು ಸಾರಿದರು. “ಯೋಗದಿಂದ ದೊರೆಯುವ ಆಂತರಿಕ ಶಾಂತಿ, ಜಾಗತಿಕ ನೀತಿಯಾಗಿ ಬದಲಾಗುವ ದಿನಗಳು ದೂರವಿಲ್ಲ” ಎಂಬ ಪ್ರಧಾನಿ ಮೋದಿ ಹೇಳಿಕೆ ಇದೀಗ ಗಮನ ಸೆಳೆದಿದೆ.

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2025 ನೇತೃತ್ವವಹಿಸಿದ್ದ
ಪ್ರಧಾನಮಂತ್ರಿ ನರೇಂದ್ರ ಮೋದಿ, “ಯೋಗವು ಗಡಿಗಳನ್ನು ಮೀರಿ ಇಡೀ ವಿಶ್ವವನ್ನು ಒಂದಾಗಿಸಿದೆ” ಎಂದು ಹೇಳಿದ್ದಾರೆ.

“ಯೋಗವು ಗಡಿಗಳು, ವಯಸ್ಸು, ಸಾಮರ್ಥ್ಯ ಮತ್ತು ಭಾಷೆಗಳನ್ನು ಮೀರಿ ಬೆಳೆದಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವ ಮಾನವತೆಯ ಹೊಸ ಅಧ್ಯಾಯವನ್ನು ಆರಂಭಿಸಿದೆ. ಆಂತರಿಕ ಶಾಂತಿ ಜಾಗತಿಕ ನೀತಿಯಾಗಿ ಬದಲಾಗುವ ದಿನಗಳು ದೂರವಿಲ್ಲ. ಇಡೀ ವಿಶ್ವ ಒಂದಾಗಿ ಮುನ್ನಡೆಯುವಲ್ಲಿ ಯೋಗ ಮಹತ್ವದ ಪಾತ್ರವನ್ನು ನಿರವಹಿಸುತ್ತಿದೆ” ಎಂದು ಪ್ರಧಾನಿ ಮೋದಿ ಸೂಚ್ಯವಾಗಿ ಹೇಳಿದರು.


Share with