ಕಾಸರಗೋಡು: ಮಣಿ ಕೃಷ್ಣ ಸ್ವಾಮಿ ಅಕಾಡಮಿ ಯ ಶ್ರೀ ಕ್ಷೇತ್ರ ಧರ್ಮಸ್ಥಳ ಕೃತಿಗಳಾಧರಿತ 14ನೇ ಸಂಗೀತ ಕಛೇರಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯಿತು. ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಗಡಿನಾಡು ಕಾಸರಗೋಡಿನಲ್ಲಿ ಚಾರಿತ್ರಿಕ ಕಾರ್ಯಕ್ರಮ ಆಯೋಜಿಸಿ ಸಿರಿಬಾಗಿಲು ಪ್ರತಿಷ್ಠಾನದ ಯೋಜನೆ ಯೋಚನೆ ಅದ್ವಿತೀಯವಾದುದು. ಸಾಂಸ್ಕೃತಿಕ ಹಾಗು ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾಯಕ ಪ್ರತಿಷ್ಠಾನ ನಡೆಸುತ್ತಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ದ ಕೃತಿ ಗಳ ನ್ನು ಆಧಾರಿಸಿ ಮಣಿಕೃಷ್ಣ ಸ್ವಾಮಿ ಅಕಾಡಮಿ ಯು ಇಂತಹ ಅಪೂರ್ವ ವಾದ ಕೊಡುಗೆ ಸಮಾಜಕ್ಕೆ ನೀಡುತ್ತಿದೆ. ಮಂಜುನಾಥ ಸ್ವಾಮಿಯು ಅನುಗ್ರಹಿಸಲಿ ಎಂದು ಹರಸಿದರು. ಕಲ್ಮಾಡಿ ಸದಾಶಿವ ಆಚಾರ್ಯ ರವರು ಅಪಾರ ಶಿಷ್ಯ ವೃಂದ ವನ್ನು ಹೊಂದಿದ ಸಂಗೀತ ಕ್ಷೇತ್ರದ ಕಾಸರಗೋಡಿನ ಹಿರಿಯ ವಿದ್ವಾಂಸ ರಾಗಿದ್ದಾರೆ.
ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ ಕಾಸರಗೋಡು, ನಿವೃತ್ತ ಪ್ರಾಧ್ಯಾಪಕ ಪ್ರೋ. ಶ್ರೀನಾಥ್, ಮೋಹನದಾಸ್ ಶೆಟ್ಟಿ ಸಿರಿಬಾಗಿಲು, ಸಂಗೀತ ವಿಧುಷಿ ರಾಧಾ ಮುರಳೀಧರನ್, ಕ್ಷ್ಮೀ ನಾರಾಯಣ ಕಾವುಮಠ ಉಪಸ್ಥಿತರಿದ್ದರು.
ಹಲವು ಕ್ಷೇತ್ರದಲ್ಲಿ ಸಂಗೀತ ಕಾರ್ಯಾಗಾರ ನಡೆಸಿದ್ದೇವೆ. ಯಕ್ಷಗಾನ ಕ್ಷೇತ್ರದ ಪ್ರಧಾನ ಕೇಂದ್ರವಾಗಿರುವ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇದೇ ಪ್ರಥಮ. ನಮ್ಮ ಸುಯೋಗ ವೆಂದು ಮಣಿ ಕೃಷ್ಣ ಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಶ್ರೀ ನಿತ್ಯಾನಂದ ರಾವ್ ಪೇಜಾವರ ಅಂದರು.
ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಸ್ವಾಗತಿಸಿದರು.
ಆ ಬಳಿಕ ಶ್ರೇಯಾ ಕೊಳತ್ತಾಯ ಸುರತ್ಕಲ್, ಉಷಾ ರಾಮಕೃಷ್ಣ ಭಟ್ ಕಿನ್ನಿಗೊಳಿ, ಶರಣ್ಯಾ ಕೆ.ಯಸ್. ಸುರತ್ಕಲ್, ಸುಮೇಧಾ ಕೆ.ಯನ್.ಮೇಧಾ ಉಡುಪ ಮಂಗಳೂರು ಇವರಿಂದ ಮಂಜುನಾದ ಸಂಗೀತ ಕಛೇರಿ ನಡೆಯಿತು, ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗ ದಲ್ಲಿ ಕೌಶಿಕ್ ರಾಮಕೃಷ್ಣನ್ ಕಾಸರಗೋಡು ಸಹಕರಿಸಿದರು .