ಎಡನೀರು ಶ್ರೀಗಳಿಂದ ರಾಧಾಕೃಷ್ಣ ಉಳಿಯತ್ತಡ್ಕ 65 – ‘ಸಮತಾ ಸಾಹಿತ್ಯ ಸೌರಭ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Share with

ಕಾಸರಗೋಡು : ಹಿರಿಯ ಕವಿ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕರ 65ನೇ ಹುಟ್ಟು ಹಬ್ಬವನ್ನು ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕದ ಆಶ್ರಯದಲ್ಲಿ ಆ.12ರಂದು ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉಳಿಯತ್ತಡ್ಕ ಶ್ರೀಶಕ್ತಿ ಸಭಾಭವನದಲ್ಲಿ ನಡೆಸಲಾಗುತ್ತಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಎಡನೀರು ಮಠದಲ್ಲಿ ನಡೆಯಿತು.

ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ವ್ಯಂಗಚಿತ್ರಕಾರ, ಚುಟುಕು ಕವಿ ವೆಂಕಟ್ ಭಟ್ ಎಡನೀರು ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ಡಿ.ದರ್ಬೆತ್ತಡ್ಕ ಸಮತಾ ಸಾಹಿತ್ಯ ವೇದಿಕೆಯ ಸುಂದರ ಬಾರಡ್ಕ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಬೊಳಿಕೆ ಜಾನಪದ ಕಲಾ ತಂಡದ ನಿರ್ದೇಶಕ ಶಂಕರ ಸ್ವಾಮಿಕೃಪಾ, ನಾರಿ ಚಿನ್ನಾರಿ ಸಂಘಟನೆಯ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ,ಗಾಯಕ ವಸಂತ ಬಾರಡ್ಕ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *