ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನುದಾನದಿಂದ ಕಣ್ಣೂರು ಶಾಲೆಯಲ್ಲಿ ನಿರ್ಮಿಸಿದ ಕಲಿಕಾ ಕೊಠಡಿಯನ್ನು ಮಂಜೇಶ್ವರ ಶಾಸಕ ಎಕೆಮ್ ಅಶ್ರಫ್ ಉದ್ಘಾಟಿಸಿದರು.
ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮೊಹಮ್ಮದ್ ಮುನೀರ್ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಪುತ್ತಿಗೆ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಮಜೀದ್ ಕಣ್ಣೂರು, ವಾರ್ಡ್ ಸದಸ್ಯ ಜನಾರ್ದನ ಪೂಜಾರಿ ಕಣ್ಣೂರು, ಕಾಸರಗೋಡು ಪ್ಯಾಕೇಜ್ ಉಸ್ತುವಾರಿ ಶಿವಪ್ರಕಾಶನಾಯರ್, ಕಾಸರಗೋಡು ಡಿ. ಡಿ .ಇ ಸುರೇಂದ್ರನ್, ಡಿ.ಇ.ಓ ನಾರಾಯಣ, ಕುಂಬಳೆ ಏ.ಇ.ಓ ಶಶಿಧರ, ಜೈರಾಮ್ ಬಿಪಿಸಿ ಕುಂಬಳೆ, ಯುಎಇ ಸಮಿತಿ ಅಧ್ಯಕ್ಷ ಮೋಯ್ದಿನ್ ಟಿಎ, ಮದರ್ ಪಿ ಟಿ ಎ ಅಧ್ಯಕ್ಷೆ ನಯನ, ಪಿಟಿಎ ಉಪಾಧ್ಯಕ್ಷ ಅಶ್ರಫ್ ಏಕೆ, ರಸಾಕ್ ಎಸ್ಎಂ, ಎಸ್ ಎಂ ಸಿ ಅಧ್ಯಕ್ಷ ಶ್ರೀ ಕೃಷ್ಣ ಆಳ್ವ ನಾವೂರು, ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ, ಜಮಾಲ್, ರಫೀಕ್,ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಣಿ ಬೇಬಿ ಸವಿತಾ ಮುಂತಾದವರು ಹಾಜರಿದ್ದರು. ಪಿಟಿಎ ಅಧ್ಯಕ್ಷ ಅಬ್ದುಲ್ಲಾ ಅವರ ಸ್ವಾಗತದೊಂದಿಗೆ ಪ್ರಾರಂಭಗೊಂಡು ಮುಖ್ಯೋಪಾಧ್ಯಾಯನಿ ಜ್ಯೋತಿ ಅವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.