ಮೊರತ್ತಣೆಯಿಂದ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿಗೆ ಪಾದಯಾತ್ರೆಗೈದ ಶಿವಶಕ್ತಿ ಫ್ರೆಂಡ್ಸ್ ಸದಸ್ಯರು

Share with

ಮೊರತ್ತಣೆಯಿಂದ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿಗೆ ಪಾದಯಾತ್ರೆ

ಮಂಜೇಶ್ವರ: ನಾಡಿನ ಸುಭಿಕ್ಷೆ ಹಾಗೂ ಸೌಹಾರ್ದತೆ ಕಾಪಾಡಲು ಮೊರತ್ತಣೆಯ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು,ಸದಸ್ಯರು ಮೊರತ್ತಣೆಯಿಂದ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿಗೆ ಪಾದಯಾತ್ರೆಗೈದು ಕೃತಾರ್ಥರಾಗಿದ್ದಾರೆ. ಇದು ಈ ಕ್ಲಬ್ಬಿನ ನೇತೃತ್ವದಲ್ಲಿ ನಡೆಯುವ ಎರಡನೇಯ ಕ್ಷೇತ್ರ ಸಂದರ್ಶನದ ಪಾದ ಯಾತ್ರೆಯಾಗಿದ್ದು ಕಳೆದ ಬಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ಗೈದಿದ್ದರು.

ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳು,ಸದಸ್ಯರು ಮೊರತ್ತಣೆಯಿಂದ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರಿಗೆ ಪಾದಯಾತ್ರೆಗೈದು ಕೃತಾರ್ಥರಾಗಿದ್ದಾರೆ.

ಈ ಬಾರಿ ಮೊರತ್ತಣೆ ಮಂತ್ರದೇವತೆ ಸನ್ನಿಧಿಯಿಂದ ಹೊರಟು ರಕ್ತೇಶ್ವರಿ ಪದವು ದೈವಸ್ಥಾನ ಮೂಲಕ ವಾಸುಕಿ ನಾಗ ಸನ್ನಿಧಿ ರಕ್ತೇಶ್ವರಿ ಪರಿವಾರ ಸನ್ನಿಧಿ ತಚ್ಚಿರೆ, ಬಳಿಕ ದುರ್ಗಾ ಪರಮೇಶ್ವರಿ ಮಂದಿರ ಸುಂಕದಕಟ್ಟೆ , ಕೊರಗಜ್ಜ ಸನ್ನಿಧಿ ವರ್ಕಾಡಿ , ಕಾವಿ ಸುಬ್ರಮಣ್ಯ ದೇವಸ್ಥಾನ ವರ್ಕಾಡಿ, ಮಂಜನ್ನಾಡಿ ವಿಷ್ಣು ಮೂತಿ೯ ದೇವಸ್ಥಾನ , ಮಂಜನ್ನಾಡಿ ದೈವಸ್ಥಾನ, ಅಲ್ಲಿಂದ ಶ್ರೀ ಕೊರಗಜ್ಜ ಧೈವದ ಆದಿಸ್ಥಳ ಕುತ್ತಾರುವಿಗೆ ತಲುಪಲಾಯಿತು. ಪಾದ ಯಾತ್ರೆಯ ನಡುವೆ ಜಾತಿ ಮತ ಭೇದ ಮರೆತು ಆಸ್ತಿಕ ವರ್ಗ ಇವರನ್ನು ಸ್ವಾಗತಿಸಿದ್ದು ಅಲ್ಲಲ್ಲಿ ಉಪಹಾರ, ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯ ಹಲವು ಜನರು ಈ ಬಾರಿಯ ಪಾದ ಯಾತ್ರೆಗೆ ಜತೆಗೂಡಿದ್ದರು.ಕ್ಷೇತ್ರ ಸಂದರ್ಶನದ ವೇಳೆ ಎಲ್ಲರೂ ಹಿಂದೂ ಸಾಂಪ್ರದಾಯಿಕ ಉಡುಪು ಧರಿಸಿ ಮಾದರಿಯಾದರು.


Share with

Leave a Reply

Your email address will not be published. Required fields are marked *