ಬೆಂಗಳೂರು : ನಾವಿಕ ನಿಲ್ಲದ ಹಡಗಿನಂತಾಗಿರುವ ರಾಜ್ಯ ಬಿಜೆಪಿಯ ಪಾಲಿಗೆ ಮಾಜಿ ಸಿಎಂ ಯಡಿಯೂರಪ್ಪನವರೇ ಆಸರೆ ಎನ್ನು ವಂತಾಗಿದೆ. “ನೀವೇ ನಾಯಕತ್ವ ವಹಿಸಿ’ ಎಂದು ಅವರಿಗೇ ಬಿಜೆಪಿ ಶಾಸಕರು ದುಂಬಾಲು ಬಿದ್ದಿದ್ದಾರೆ.

6 ತಿಂಗಳುಗಳಲ್ಲಿ ಸರಕಾರ ಬೀಳಲಿದೆ ಎಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಹಾಗೂ ಅದರ ಬೆನ್ನಲ್ಲೇ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಸುದ್ದಿಗಳು ಹರಿದಾಡ ಲಾರಂಭಿಸಿದ್ದು, ಪಕ್ಷದ ಅಧ್ಯಕ್ಷ – ವಿಪಕ್ಷ ಸ್ಥಾನಗಳಿಗೆ ಸಮರ್ಥ ನಾಯಕತ್ವ ಬೇಕಿದೆ ಎಂಬ ಚರ್ಚೆ ಪಕ್ಷದೊಳಗೆ ಆರಂಭವಾಗಿದೆ.
ರಾಜ್ಯ ಕಾಂಗ್ರೆಸ್ ಸರಕಾರ ಅತಿರೇಕದಿಂದ ವರ್ತಿಸಿದರೆ ಏನು ಮಾಡಬೇಕೆಂದು ನಮಗೆ ಗೊತ್ತಿದೆ ಎಂದು ಸಿ.ಟಿ. ರವಿ ಎಚ್ಚರಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಸುಮ್ಮನೆ ಕುಳಿತುಕೊಳ್ಳುವವರು ನಾವಲ್ಲ. ನಾವೇನಾದರೂ ಮಾಡಿದರೆ ಮೇಲೇಳಲು ಆಗು ವುದಿಲ್ಲ ಎಂದು ಎಚ್ಚರಿಕೆ ನೀಡಿ ದರು. ಪಕ್ಷದ ಹಿರಿಯ ಶಾಸಕ ರನ್ನು ಹಿಡಿದಿಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ನಮಗೆ ಪಕ್ಷ ಕಟ್ಟಲು ಗೊತ್ತು. ಅದನ್ನು ಉಳಿಸಿ ಕೊಳ್ಳುವುದೂ ಗೊತ್ತು ಎಂದರು.