ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ, ಶಶಿಕಾಂತ್ ಸೆಂಥಿಲ್ ಅವರು ತಮಿಳುನಾಡು ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗುವ ಸಾಧ್ಯತೆಗಳು ಹೆಚ್ಚಿವೆ. ಇವರು 2017 ರಂದು ದ.ಕ ಜಿಲ್ಲೆಯಲ್ಲಿ 2017 ರಂದು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸಕ್ತ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ಕೆ.ಎಸ್.ಅಳಗಿರಿ ಅವರ ಅಧಿಕಾರಾವಧಿ ಈಗಾಗಲೇ ಪೂರ್ಣಗೊಂಡಿದೆ. ಆದಾಗ್ಯೂ, ಪಕ್ಷದ ಮೇಲಿನ ಅವರ ನಿಷ್ಠೆಯನ್ನು ಗೌರವಿಸಿ 2024ರ ಲೋಕಸಭೆ ಚುನಾವಣೆವರೆಗೂ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈ ಕಮಾಂಡ್ ನಿರ್ಧರಿಸಿದೆ. ಏತನ್ಮಧ್ಯೆ, ತಮಿಳು ನಾಡು ಕಾಂಗ್ರೆಸ್ ಸಮಿತಿಯನ್ನು ಮೂರು ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು, ಮೊದಲನೇ ವಿಭಾಗವನ್ನು ಅಳಗಿರಿ, 2ನೇ ವಿಭಾಗವನ್ನು ಸಿಎಲ್‌ಪಿ ನಾಯಕ ಸೆಲ್ವಪೆರು ತುಂಗೈ ಮುನ್ನಡೆಸುತ್ತಿದ್ದಾರೆ. ಮೂರನೇ ವಿಭಾಗದ ಉಮೇದುವಾರಿಕೆ ಯನ್ನು ಸೆಂಥಿಲ್ ಅವರಿಗೆ ನೀಡುವ ಪ್ರಸ್ತಾಪವಿದೆ.