ಉಪ್ಪಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುಳಿಂಜ ಶಿವತೀರ್ಥಪದವು ಇದರ ಆಶ್ರಯದಲ್ಲಿ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಗಣೇಶನ ವಿಗ್ರಹದ ವಿಸರ್ಜನಾ ಶೋಭಾಯಾತ್ರೆ ಸೋಮವಾರ ನಡೆಯಿತು. ಮಂದಿರದಿoದ ಹೊರಟು ಪಚ್ಲಂಪಾರೆ, ಉಪ್ಪಳ ಪೇಟೆ, ರೈಲ್ವೇ ನಿಲ್ದಾಣ ರಸ್ತೆ ಮೂಲಕ ಸಾಗಿ ರಾತ್ರಿ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಇವರಿಂದ ವಿಸರ್ಜನಾ ಮೆರವಣಿಗೆಯ ಸ್ವಾಗತ ಹಾಗೂ ಮಹಾ ಮಂಗಳಾರತಿ ಬಳಿಕ ಹನುಮಾನ್‌ನಗರದ ಸಿಂಧೂ ಸಾಗರದಲ್ಲಿ ಜಲಸ್ತಂಭನ ನಡೆಯಿತು.