ವೀಕ್ಷಕವಾಣಿ: ರಕ್ಷಿತ್ ನಟನೆಯ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಇದೀಗ ನ್ಯಾಷನಲ್ ಕ್ರಷ್ ಆಗಿ ಮಿಂಚುತ್ತಿದ್ದಾರೆ. ಆದರೆ ಒಂದಲ್ಲಾ ಒಂದು ರೀತಿಯಲ್ಲಿ ಟ್ರೋಲಿಗರ ಕಂಟೆಂಟ್ ಆಗುತ್ತಿದ್ದ ಇವರು, ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಗೂ ಕನ್ನಡ ಸಿನಿಮಾ ಪ್ರೇಮಿಗಳ ಮೇಲೆ ಅಪಾರ ಆಸಕ್ತಿ ತೋರುತ್ತಿರುವಂತಹ ರಶ್ಮಿಕಾ ಕನ್ನಡದಲ್ಲಿ ಮಾತನಾಡಿ ಮತ್ತೆ ಟ್ರೋಲ್ ಆಗಿದ್ದಾರೆ. ಕನ್ನಡದಲ್ಲಿ ಎರಡು ಸಾಲು ಮಾತನಾಡುವುದರಲ್ಲಿಯೇ ರಶ್ಮಿಕಾ ಎಡವಟ್ಟು ಮಾಡಿಕೊಂಡಿದ್ದಾರೆ. ರಶ್ಮಿಕಾ ಕನ್ನಡದಲ್ಲಿ ಮಾತನಾಡಿರುವ ವೀಡಿಯೋ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
‘ಎಲ್ಲರೂ ಹೇಗಿದ್ದೀರಾ? ನಾನು ಚೆನ್ನಾಗಿದ್ದೀನಿ ಯಾವಾಗಲೂ ನೌತಾ ಇರಿ. ನಾನು ನಿಮ್ಮ ಬಗ್ಗೆ ಯೋಚಿಸುತ್ತಿರುತ್ತೇನೆ’ ಎಂದಿದ್ದಾರೆ. ‘ಯಾವಾಗಲೂ ನಗ್ತಾ ಇರಿ’ ಎನ್ನುವ ಬದಲು ‘ಎಲ್ಲರೂ ಯಾವಾಗಲೂ ನೌತಾ ಇರಿ’ ಎಂದಿದ್ದಾರೆ. ರಶ್ಮಿಕಾ ತಪ್ಪಾಗಿ ಕನ್ನಡ ಮಾತನಾಡಿರುವುದು ಟ್ರೋಲಿಗರಿಗೆ ಆಹಾರವಾಗಿದೆ. ಸದಾ ಒಂದಲ್ಲ ಒಂದು ವಿಚಾರದಿಂದ ಟ್ರೊಲ್ ಆಗುವ ರಶ್ಮಿಕಾ ಸಾಕಷ್ಟು ದಿನಗಳಿಂದ ಟ್ರೋಲ್ ಗಳಿಂದ ದೂರ ಉಳಿದುಕೊಂಡಿದ್ದರು. ಆದರೆ ಈಗ ಮತ್ತೆ ಕನ್ನಡ ತಪ್ಪಾಗಿ ಮಾತನಾಡಿ ಟ್ರೋಲ್ ಪೇಜ್ ಗಳಲ್ಲಿ ಸದ್ದು ಮಾಡ್ತಿದ್ದಾರೆ.