
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮದ್ವ ಕಲ್ಕರಬೆಟ್ಟು ಗುತ್ತು ಮನೆಯಲ್ಲಿ ನವರಾತ್ರಿ ಪೂಜಾ ಮಹೋತ್ಸವವೂ ವಿಜ್ರಂಭಣೆಯಿಂದ ನಡೆಯಿತು. ಗುತ್ತು ಮನೆಯ ಗುರಿಕಾರರಾದ ಸುಂದರ ಪೂಜಾರಿ ಗುರಿಪಳ್ಳ, ರಮಾನಂದ ಕನ್ಯಾಡಿ, ದಯಾನಂದ ಕಿಲ್ಲೂರು, ಸುಧೀರ್ ನಿರ್ಮಾಲ್ ಹಾಗೂ ಕುಟುಂಬಸ್ಥರು, ಗ್ರಾಮಸ್ಥರು ಅತ್ಯಧಿಕ ಸಂಖ್ಯೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡರು.

ಪೂಜೆ ಕಾರ್ಯದ ನಿಮಿತ್ತ ಓಂಕಾರ ಪ್ರೆಂಡ್ಸ್ ಮದ್ವ ಇವರ ಭಜನಾ ತಂಡವು ಕುಣಿತ ಭಜನೆಯು ಬಹಳ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಕುಟುಂಬಸ್ಥರಿಂದ ಹಾಗೂ ಗ್ರಾಮಸ್ಥರಿಂದ ಕಲ್ಕರಬೆಟ್ಟು ದೈವ ದೇವರುಗಳ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ದೈವ ದೇವರುಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮುಂದಿನ ಜೀರ್ಣೋದ್ಧಾರದ ಪೂರ್ವ ತಯಾರಿ ಹಾಗೂ ಹಣದ ವಂತಿಗೆಯನ್ನು ಈ ಸಂದರ್ಭದಲ್ಲಿ ಪಡೆಯಲಾಯಿತು.