ನವರಾತ್ರಿ ಮೂರನೇ ದಿನ.. ಚಂದ್ರಘಂಟಾ ದೇವಿಯ ಆರಾಧನೆ

Share with

ನವರಾತ್ರಿಯು ಹಿಂದೂಗಳ ಪ್ರಮುಖ ಹಬ್ಬವಾಗಿದೆ. ನವರಾತ್ರಿಯಲ್ಲಿ ಪ್ರತಿದಿನ ದೇವಿಯ ವಿಭಿನ್ನ ರೂಪವನ್ನು ಪೂಜಿಸಲಾಗುತ್ತದೆ. ಈ ಬಾರಿ ಶಾರದೀಯ ನವರಾತ್ರಿ ಅಕ್ಟೋಬರ್ 3 ರಿಂದ ಆರಂಭವಾಗಿದೆ. ನವರಾತ್ರಿಯ ಮೂರನೇ ದಿನವಾದ ಅಕ್ಟೋಬರ್ 5, ಶನಿವಾರದಂದು ಮಾತೆ ಚಂದ್ರಘಂಟಾ ರೂಪವನ್ನು ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳಿಂದ ಪರಿಹಾರವನ್ನು ಪಡೆಯಬಹುದು. ಚಂದ್ರಘಂಟಾ ದೇವಿಯ ಪೂಜಾ ವಿಧಾನ, ಮಂಗಳಕರ ಸಮಯ, ಆರತಿ, ಮಂತ್ರ ಮತ್ತು ಕಥೆ ಏನು ಗೊತ್ತಾ?

ಚಂದ್ರಘಂಟಾ ದೇವಿಯ ಆರಾಧನಾ ವಿಧಾನ

– ಅಕ್ಟೋಬರ್ 5 ಶನಿವಾರದಂದು ಮುಂಜಾನೆ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ, ಮನೆಯಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಚಂದ್ರಘಂಟಾ ದೇವಿಯ ಚಿತ್ರವನ್ನು ಪ್ರತಿಷ್ಠಾಪಿಸಿ.

– ಚಂಧ್ರಘಂಟಾ ದೇವಿಯ ವಿಗ್ರಹವನ್ನು ಕೇಸರಿ, ಗಂಗಾಜಲ, ಹೂವಿನ ನೀರಿನಲ್ಲಿ ಸ್ನಾನ ಮಾಡಿಸಿ ಮೇಜಿನ ಮೇಲೆ ಇರಿಸುವ ಮೂಲಕ ಪೂಜೆ ಪ್ರಾರಂಭವಾಗುತ್ತದೆ.

– ಆಕೆಗೆ ಚಿನ್ನದ ಬಣ್ಣದ ಬಟ್ಟೆಗಳನ್ನು ಹೊದಿಸಿ, ಕಮಲದ ಹೂವುಗಳನ್ನು ಇಡಲಾಗುತ್ತದೆ.

– ಮೊದಲನೆಯದಾಗಿ ದೇವಿಗೆ ತಿಲಕವನ್ನು ಹಚ್ಚಿ ಮತ್ತು ಹೂವಿನ ಹಾರವನ್ನು ಹಾಕಿ. ಇದರ ನಂತರ ಕುಂಕುಮ, ಅಕ್ಕಿ, ಬಳೆ, ಮೆಹಂದಿ, ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ಇಡಿ.

-ಬಳಿಕ ದೇವಿಗೆ ಸಿಹಿತಿಂಡಿಗಳು, ಪಂಚಾಮೃತವನ್ನು ಅರ್ಪಿಸಲಾಗುತ್ತದೆ.

ಮಂತ್ರ (11 ಬಾರಿ ಪಠಿಸಿ)
ಪಿಂಡಜ ಪ್ರವರಾರೂಢಾ ಚಂಡಕೋಪಾಸ್ತ್ರಕಾರ್ಯುತಾ ।

ಪ್ರಸಾದಂ ತನುತೇ ಮಹಾಯಂ ಚಂದ್ರಘಂಟೇತಿ ವಿಶ್ರುತಾ॥

ಚಂದ್ರಘಂಟಾ ಯಾರು?
ಜನಪ್ರಿಯ ಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಮಹಿಷಾಸುರ ಎಂಬ ರಾಕ್ಷಸನಿದ್ದನು. ಅವನು ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು. ನಂತರ ಎಲ್ಲಾ ದೇವರುಗಳು ತ್ರಿಮೂರ್ತಿಗಳ ಬಳಿಗೆ ಹೋದರು. ನಂತರ ತ್ರಿಮೂರ್ತಿಗಳು ತಮ್ಮ ಶಕ್ತಿಯಿಂದ ದೇವತೆಯನ್ನು ರೂಪಿಸಿದರು. ಈ ದೇವಿಯನ್ನು ದುರ್ಗಾ ಎಂದು ಕರೆಯಲಾಯಿತು. ದೇವಿಯ ತಲೆಯ ಮೇಲೆ ಚಂದ್ರನು ಕುಳಿತಿದ್ದರಿಂದ ಅವಳ ಹೆಸರು ಚಂದ್ರಘಂಟಾ ಎಂದು ಬಂತು. ಈ ದೇವಿಯು ಮಹಿಷಾಸುರನೊಂದಿಗೆ ಹೋರಾಡಿ ಅವನನ್ನು ಕೊಂದಳು.

ಚಂದ್ರಘಂಟಾ ಹೇಗಿದ್ದಾಳೆ?
ಚಂದ್ರಘಂಟಾ ದೇವಿ ಪಾರ್ವತಿ ದೇವಿಯ ಮೂರನೇ ಅವತಾರ. ಈಕೆಗೆ ಹತ್ತು ಕೈಗಳಿವೆ. ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

ಕಠಿಣ ತಪ್ಪಿಸಿನ ಮೂಲಕ ಶಿವನನ್ನು ಮೆಚ್ಚಿಸಿ ಮದುವೆಯಾಗಲು ತೀರ್ಮಾನಿಸುತ್ತಾಳೆ ಹಿಮವಂತ ಹಾಗೂ ಮೈನಾ ದೇವಿಯ ಮಗಳು. ಮದುವೆ ಮೆರವಣಿಗೆಯಲ್ಲಿ ಶಿವನು ಸ್ಮಶಾನವಾಸಿಯಾಗಿ ಇರುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವು, ಗಂಟಿನಂತಿರುವ ಜಟೆ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳು ಇರುತ್ತಾರೆ. ಇದನ್ನು ನೋಡಿ ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ.

ಇದನ್ನು ಕಂಡು ಶಿವನಿಗೆ ಮುಜುಗರವಾಗದಿರಲಿ ಎಂದು ಭಯಾನಕ ರೂಪವಾಗಿ ಚಂಧ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ. ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತುಗಳಲ್ಲಿ ಒಂದೊಂದು ಆಯುಧಗಳನ್ನು ಹಿಡಿದಿರುತ್ತಾಳೆ. ಒಂದರಲ್ಲಿ ತ್ರಿಶೂಲ, ಗದೆ, ಬಿಲ್ಲು ಬಾಣ, ಖಡ್ಗ, ಕಮಲ, ಘಂಟೆ, ಕಂಡಲ ಹಾಗೂ ಅಭಯ ಮುದ್ರೆಯಿಂದ ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ಆಗ ಶಿವನಿಗೆ ನಿಜ ರೂಪ ತಾಳಲು ಚಂದ್ರಘಂಟೆ ಪ್ರೇರೇಪಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ತನ್ನ ನಿಜರೂಪ ತಾಳುತ್ತಾನೆ. ಇದರಿಂದ ಮದುವೆಯಲ್ಲಿದ್ದವರು ಅಚ್ಚರಿಗೊಳ್ಳುತ್ತಾರೆ. ಬಳಿಕ ಇವರಿಬ್ಬರ ಮದುವೆ ನಡೆಯುತ್ತದೆ.


Share with

Leave a Reply

Your email address will not be published. Required fields are marked *