
ಸಕಲೇಶಪುರ:ಕರ್ನಾಟಕ ಪಬ್ಲಿಕ್ ಶಾಲೆ ಹಾನುಬಾಳು ಸಕಲೇಶಪುರ ತಾ.ಹಾಸನ ಜಿ. ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ಕಾರ್ಯಕ್ರಮವು
ದಿನಾಂಕ: 20-05-2025 ರಂದು. ಕೆ.ಪಿ.ಎಸ್. ಶಾಲಾ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಹೆಚ್.ಕೆ.ಅರುಣ್ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಇಲಾಖೆಯ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪುಷ್ಪಾರವರು ಭಾಗವಹಿಸಿದ್ದರು. ಅತಿಥಿಗಳಾಗಿ ಎಸ್ ಡಿ.ಎಂ.ಸಿ.ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ರೆಹಮಾನ್, ಸದಸ್ಯರಾದ ಶ್ರೀ ಮಂಜುನಾಥ್, ಶ್ರೀಮತಿ ವಿನೋದ, ಶ್ರೀಮತಿ ಪ್ರಶಸ್ತಿ,ಅನಿಲ್,ಅವಿನಾಶ್, ಶ್ರೀ ನಜೀರ್ ಮತ್ತು ಇಲಾಖೆಯ ಶ್ರೀ ಗಂಗಾಧರ್ ಬಿ.ಆರ್.ಸಿ,ಮೋಹನ್ ಎಂ.ಡಿ.ಎಂ. ರವರು ಉಪಸ್ಥಿತರಿದ್ದರು.
ಹಾಗೂ ವಿಧ್ಯಾರ್ಥಿಗಳ ಸಮ್ಮಿಲನದಲ್ಲಿ ಶಾಲೆಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಗಳಿಸಿದ, ವಿಧ್ಯಾರ್ಥಿನಿ ಕು.ಮನೋಜ್ನಳನ್ನು ಶಾಲೆಯ ಪರವಾಗಿ ಗೌರವಿಸಲಾಯಿತು. ಹಾಗೆಯೇ ಶಾಲೆಗೆ ಉತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿ ಗೌರವಿಸಿದರು.