ಪೆಪ್ಪರ್‌ಫ್ರೈ ಸಹ-ಸಂಸ್ಥಾಪಕ ಮತ್ತು ಸಿಇಒ ಅಂಬರೀಶ್ ಮೂರ್ತಿ(51) ನಿಧನರಾಗಿದ್ದಾರೆ.
ಅವರು ಲೇಜ್‌ನಲ್ಲಿರುವಾಗ ನಿನ್ನೆ ರಾತ್ರಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು ಎಂದು ಕಂಪನಿಯ ಸಹ ಸಂಸ್ಥಾಪಕರಾದ ಆಶಿಶ್ ಶಾ ತಿಳಿಸಿದ್ದಾರೆ. ‘ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮೀಯ ಗೆಳೆಯ ಅಂಬರೀಶ್ ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗಿದೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಬಂಧುಗಳಿಗೆ ಅಗಲಿಕೆ ನೋವು ಸಹಿಸುವ ಶಕ್ತಿ ನೀಡುವಂತೆ ಪ್ರಾರ್ಥಿಸಿ’ ಎಂದು ಶಾ ಹೇಳಿದ್ದಾರೆ.