ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪುತ್ತೂರು ಜಗದೀಶ್ ಆಚಾರ್ಯ ತಂಡದಿಂದ ವಿಶೇಷವಾದ ಭಜನೆ ಹಾಗೂ ಕುಣಿತ ಭಜನೆಗಾಗಿ ನಿರ್ಮಿತವಾದ ಹೊಸ ದಾಸರ ಪದ ವೀಡಿಯೋ ಆಲ್ಬಂ ನ್ನು ಸುಪ್ರೀತ ಮತ್ತು ಭರತ್ ಶೆಟ್ಟಿಗಾರ್ ಹಾಗೂ ಮಾಸ್ಟರ್ ಚಿರಾಗ್ ಸುರತ್ಕಲ್ ಇವರ ನಿರ್ಮಾಣದಲ್ಲಿ ಮೂಡಿ ಬಂದಿದೆ. ಈ ಭಕ್ತಿಗೀತೆ ಆ. 27 ರಂದು ಆದಿತ್ಯವಾರ ʼಜಗದೀಶ್ ಪುತ್ತೂರು ಯುಟ್ಯೂಬ್ ಚಾನಲ್ʼ ನಲ್ಲಿ ಬಿಡುಗಡೆಗೊಳ್ಳಲಿದೆ. ಈ ಹಾಡಿನ ಸಂಗೀತ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಪುತ್ತೂರು ಜಗದೀಶ್ ಆಚಾರ್ಯ, ಸಹ ಗಾಯಕಿಯರಾಗಿ ಸಮನ್ವಿ ರೈ ಮದಕ, ಜನ್ಯ ಪ್ರಸಾದ್ ಅನಂತಾಡಿ, ಅಶ್ವಿನಿ ಕೋಳಿಕ್ಕಜೆ, ತನುಶ್ರೀ ಮಂಗಳೂರು, ವೈಷ್ಣವಿ ಐ ಎಂ ಮಂಗಳೂರು, ದಿವ್ಯನಿಧಿ ರೈ ಎರುಂಬು, ಸಾಹಿತ್ಯ ಆಚಾರ್ಯ ಪುತ್ತೂರು ಜೊತೆಗೂಡಿದ್ದಾರೆ.
ಪುಟಾಣಿ ಕೃಷ್ಣನ ಪಾತ್ರದಲ್ಲಿ ಅವೀಶ್ ಎಸ್ ಶೆಟ್ಟಿ ಬಿಕರ್ನಕಟ್ಟೆ ಮಂಗಳೂರು, ಧನಿಶ್ಕ ಕೋಡಿಕೆರೆ ಸುರತ್ಕಲ್,
ಸಾನಿಕ ಎಸ್ ಕಿದಿಯೂರು, ಮೇಹ ರೈ ಪುತ್ತೂರು, ಅರುಶಿ ಉಜಿರೆ, ಚುಕ್ಕಿ ವಿಟ್ಲ ಭಾಗವಹಿಸಿದ್ದಾರೆ.
ಛಾಯಾಗ್ರಹಣ ಅರುಣ್ ರೈ, ಸಂಕಲನ ಚರಣ್ ಆಚಾರ್ಯ, YT ಶಿಶಿರ್ ರೈ ಚೆಲ್ಯಡ್ಕ ನಿರ್ವಹಿಸಿದ್ದಾರೆ.