ಮಲಯಾಳಂ ಚಿತ್ರರಂಗದಲ್ಲಿ ನಟಿಸುತ್ತಿರುವ ನಟಿ ರಾಚೆಲ್ ಡೇವಿಡ್ ಇದೀಗ ಕನ್ನಡ ಸಿನಿಮಾ ರಂಗದಲ್ಲೂ ಮಿಂಚುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮೊಕ್ತೈಲ್-2’ ಚಿತ್ರದ ಮೂಲಕ ಎಂಟ್ರಿಯಾದ ರಾಚೆಲ್ ಡೇವಿಡ್, ಇದೀಗ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ನಟ ಅನಿರುದ್ಧ ಅವರು ನಟಿಸುತ್ತಿರುವ ‘ಚೆಫ್ ಚಿದಂಬರಂ’ ಚಿತ್ರದಲ್ಲಿ ಅವರೊಂದಿಗೆ ರಾಚೆಲ್ ಜೋಡಿಯಾಗಲಿದ್ದಾರೆ. ಅಲ್ಲದೆ, ‘ಅನ್ಲಾಕ್ ರಾಘವ್’ ‘ಕಂಟ್ರಿ ಪಿಸ್ತೂಲ್’ ಸೇರಿ ಇತರ ಚಿತ್ರಗಳಲ್ಲೂ ನಟಿಸಲಿದ್ದಾರೆ.