10 ಕೋಟಿ ರೂ. ಲಾಟರಿ ಗೆದ್ದ 11 ಪೌರಕಾರ್ಮಿಕ ಮಹಿಳೆಯರು..!!

Share with

ಮಲಪ್ಪುರಂ:  ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ನಗರಸಭೆಯ 11 ಮಂದಿ ಮಹಿಳಾ ಪೌರಕಾರ್ಮಿಕರ ಅದೃಷ್ಟ ಕೈಹಿಡಿದೆ. ಬುಧವಾರ ನಡೆದ ಡ್ರಾ ನಂತರ ಕೇರಳ ಲಾಟರಿ ಇಲಾಖೆಯು 10 ಕೋಟಿ ರೂಪಾಯಿಗಳ ಮಾನ್ಸೂನ್ ಬಂಪರ್ ವಿಜೇತರನ್ನು ಘೋಷಿಸಿದ್ದು 11 ಮಂದಿ ಮಹಿಳಾ ಪೌರ ಕಾರ್ಮಿಕರು ವಿಜೇತರಾಗಿದ್ದಾರೆ. ಪರಪ್ಪಂನಂಗಡಿ ನಗರಸಭೆಯ ‘ಹರಿತ ಕರ್ಮ ಸೇನೆ’ಯ 11 ಮಹಿಳೆಯರು ಅಂದರೆ ಒಬ್ಬೊಬ್ಬರು ತಲಾ 25 ರೂ. ಷೇರು ಹಾಕಿ ಟಿಕೆಟ್ ಖರೀದಿಸಿದ್ದರು.

ಕುಟ್ಟಿಮಾಲು, ಬೇಬಿ, ಶೋಭಾ, ಪಾರ್ವತಿ, ರಾಧಾ, ಲಕ್ಷ್ಮಿ, ಲೀಲಾ, ಬಿಂದು, ಶೀಜಾ, ಚಂದ್ರಿಕಾ ಮತ್ತು ಕಾರ್ತ್ಯಾಯನಿ ಮಾನ್ಸೂನ್ ಬಂಪರ್ ಪ್ರಥಮ ಬಹುಮಾನ ಪಡೆದವರು. ಮೊದಲು 9 ಮಂದಿ ಸೇರಿ ಲಾಟರಿ ಟಿಕೆಟ್ ಖರೀಸಲು ನೋಡಿದೆವು, ಆದರೆ ಹಣದ ಕೊರತೆಯಿಂದ ಮತ್ತಿಬ್ಬರು ಕಾರ್ಮಿಕರು ಸೇರಿಕೊಂಡರು. ಕೊನೆಗೆ 11 ಮಂದಿ ಸೇರಿದ 250 ರೂಪಾಯಿಯ ಟಿಕೆಟ್ ಖರೀದಿಸಿದೆವು ಎಂದು ಟಿಕೆಟ್ ಖರೀದಿಸಿದ ರಾಧ ತಿಳಿಸಿದ್ದಾರೆ. ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ, ಚಿಕಿತ್ಸೆಯ ವೆಚ್ಚ ಸೇರಿ ನಾವೆಲ್ಲರೂ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಈಗ ಹಣ ಗೆದ್ದಿರುವುದು ಬದುಕಿನಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ’ ಎನ್ನುತ್ತಾರೆ ಪೌರಕಾರ್ಮಿಕ ಮಹಿಳೆಯರು. ಟಿಕೆಟ್ ಸಂಖ್ಯೆ MB 200261 ಮೊದಲ ಬಹುಮಾನ 10 ಕೋಟಿ ರೂ. ಬಹುಮಾನದ ಚೀಟಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಪರಪ್ಪನಂಗಡಿ ಶಾಖೆಗೆ ಹಸ್ತಾಂತರಿಸಲಾಗಿದೆ


Share with

Leave a Reply

Your email address will not be published. Required fields are marked *