ಸೆ.16: ರಂಗಕರ್ಮಿ ಮಂಜು ವಿಟ್ಲ ಅವರಿಗೆ ಸಾರ್ವಜನಿಕ ಸಂತಾಪ ಸೂಚಕ ಸಭೆ

Share with

ಬಂಟ್ವಾಳ: ಸೆ.6ರಂದು ವಿಧಿವಶರಾದ ಹಿರಿಯ ಚಿತ್ರ ಕಲಾವಿದ, ರಂಗಕರ್ಮಿ ಮಂಜು ವಿಟ್ಲ ಅವರಿಗೆ ಸಾರ್ವಜನಿಕ ಸಂತಾಪ ಸೂಚಕ ಸಭೆಯು ಸೆ.16 ರಂದು ಬಿ.ಸಿ ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ತುಳುಕೂಟವು ಆಯೋಜಿಸಿದೆ.

ಸೆ.16ರಂದು ಸಂಜೆ 4:30ಕ್ಕೆ ಸಂತಾಪ ಸೂಚಕ ಸಭೆಯು ನಡೆಯಲಿದ್ದು, ಮಂಜು ವಿಟ್ಲ ಅವರು ತೊಡಗಿಸಿಕೊಂಡಿದ್ದ ಎಲ್ಲಾ ಕ್ಷೇತ್ರಗಳ ಒಡನಾಡಿಗಳು ಈ ಸಭೆಯಲ್ಲಿ ಭಾಗವಹಿಸಿ ನುಡಿ ನಮನ ಸಲ್ಲಿಸಲಿದ್ದಾರೆ. ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ರಂಗಕರ್ಮಿ ಮಂಜು ವಿಟ್ಲ ಅವರು ಎಲ್ಲರಿಗೂ ಬೇಕಾದವರಾಗಿದ್ದು, ಎಲ್ಲರೊಂದಿಗೆ ಭೇದ-ಭಾವವಿಲ್ಲದೆ ಬೆರೆಯುತ್ತಿದ್ದರು. ಆದ್ದರಿಂದ ತುಳುಕೂಟ ಬಂಟ್ವಾಳವು ಸಮಾಜದ ಬಂಧುಗಳೊಂದಿಗೆ ಸೇರಿ ಈ ಸಭೆಯನ್ನು ಆಯೋಜಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Share with

Leave a Reply

Your email address will not be published. Required fields are marked *