ಪುತ್ತೂರು : ಈ ಬಾರಿ ಗಣೇಶ ಚತುರ್ಥಿಯ ಬದಲಿಗೆ ಗೌರಿ ಹಬ್ಬಕ್ಕೆ ಸರಕಾರಿ ರಜೆ ನೀಡಲಾಗಿದೆ.
2023ನೇ ಸಾಲಿನಲ್ಲಿ ರಾಜ್ಯಾದ್ಯಂತ 19 ಸಾರ್ವತ್ರಿಕ ರಜೆ ಮತ್ತು ಸರಕಾರಿ ನೌಕರರಿಗೆ 17 ಪರಿಮಿತ ರಜೆಗಳೂ ಸೇರಿದಂತೆ ಒಟ್ಟು 36 ರಜೆಗಳನ್ನು ಘೋಷಿಸಲಾಗಿತ್ತು.
ಸರಕಾರ ಘೋಷಿಸಿದ ರಜೆಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ 2 ಸಾರ್ವತ್ರಿಕ ರಜೆಗಳನ್ನು ನೀಡಿದ್ದು ,ಅದರಲ್ಲಿ ಸೆ.18ರಂದು ಗಣೇಶ ಚತುರ್ಥಿಗೆ ಮತ್ತು ಸೆ.28ರಂದು ಈದ್ ಮಿಲಾದ್ ಗೆ ರಜೆ ನೀಡಲಾಗಿದೆ.
ಸೆ.19ರಂದೇ ಗಣೇಶ ಚತುರ್ಥಿಗೆ ಸರಕಾರಿ ರಜೆ ನೀಡುವಂತೆ ಸಾರ್ವಜನಿಕ ವಲಯದಿಂದ ಬೇಡಿಕೆ ವ್ಯಕ್ತವಾಗಿದೆ.