ತನ್ನ ತಾಯಿಯ ಪಿಂಡ ಪ್ರದಾನಕ್ಕೆ ತೆರಳಿದ್ದ ಮಗ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಇಲ್ಲಿನ ಕೋಟದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತ ಗಣೇಶ್ ಅಧಿಕಾರಿ (76). ಅವರು ತನ್ನ ತಾಯಿಯ ಶ್ರಾದ್ಧ ಕಾರ್ಯ ಮುಗಿಸಿ, ಸಂಪ್ರದಾಯದಂತೆ ಸಂಜೆಯ ವೇಳೆ 5.30ಕ್ಕೆ ಪಿಂಡ ಪ್ರದಾನ ಮಾಡಲು ಮನೆ ಬಳಿಯ ಕೆರೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಯಿಯ ಪಿಂಡ ಪ್ರದಾನಕ್ಕೆ ಹೋಗಿದ್ದ ಮಗ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಇಲ್ಲಿನ ಕೋಟದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತರು ಗಣೇಶ್ ಅಧಿಕಾರಿ (76). ಅವರು ತನ್ನ ತಾಯಿಯ ಶ್ರಾದ್ಧ ಕಾರ್ಯ ಮುಗಿಸಿ, ಸಂಪ್ರದಾಯದಂತೆ ಸಂಜೆ 5.30ಕ್ಕೆ ಪಿಂಡ ಪ್ರದಾನ ಮಾಡಲು ಮನೆ ಬಳಿಯ ಕೆರೆಗೆ ಹೋಗಿದ್ದರು. ಅರ್ಧ ಗಂಟೆಯಾದರೂ ಅವರು ಮನೆಗೆ ಹಿಂತಿರುಗದೇ ಇದ್ದ ಕಾರಣ ಗಣೇಶ್ ರವರ ಮಗ ಹೋಗಿ ನೋಡಿದಾಗ ಶವವು ಕೆರೆಯಲ್ಲಿ ತೇಲುತಿತ್ತು. ಅವರು ಪಿಂಡ ಹಾಕಲು ಹೋದಾಗ, ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮುಳುಗಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.