ಜಾಗದ ತಕರಾರು: ನಗರಸಭಾ ಸದಸ್ಯನಿಂದ ದಂಪತಿ ಮೇಲೆ ಹಲ್ಲೆ, ಜೀವಬೆದರಿಕೆ

Share with

ಉಡುಪಿ: ಜಾಗದ ತಕರಾರಿಗೆ ಸಂಬಂಧಿಸಿ ದಂಪತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಸೇರಿದಂತೆ ಇತರ 6 ಮಂದಿ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಕ್ಕುಂಜೆಯ ಸವಿತಾ ಎಂಬವರು ಮಹಿಳಾ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ಸವಿತಾ ಹಾಗೂ ಬಾಲಕೃಷ್ಣ ಶೆಟ್ಟಿ ಅವರಿಗೆ ಸುಮಾರು 4 ವರ್ಷಗಳಿಂದ ಸವಿತಾ ಅವರ ಮನೆ ಜಾಗ ಹಾಗೂ ಸವಿತಾ ಅವರ ಪತಿಯ ಗ್ಯಾರೇಜ್ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನ್ಯಾಯಾಲಯದಲ್ಲಿದೆ.
ಈ ನಡುವೆ 2 ಬಾರಿ ಬಾಲಕೃಷ್ಣ ಶೆಟ್ಟಿ ಇತರ ಆರೋಪಿಗಳೊಂದಿಗೆ ಸವಿತಾ ಅವರ ಪತಿಯ ಗ್ಯಾರೇಜ್‌ನ ಬಳಿ ಹೋಗಿ ಮಣಿಪಾಲ ಠಾಣೆಯಲ್ಲಿ ದಾಖಲಿಸಿದ ಕೇಸ್ ಅನ್ನು ವಾಪಸ್‌ ಪಡೆಯುವಂತೆ ಹಾಗೂ ಇಲ್ಲದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದರು.
ಆ ಬಳಿಕ ಆರೋಪಿ ಬಾಲಕೃಷ್ಣ ಶೆಟ್ಟಿ ಇತರ 29 ಜನರೊಂದಿಗೆ ಗ್ಯಾರೇಜ್ ಬಳಿ ತೆರಳಿ ಸ್ಟೀಲ್ ರಾಡ್ ನಿಂದ ಸವಿತಾ ಹಾಗೂ ಅವರ ಪತಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸವಿತಾ ದೂರಿನಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *